ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಗೋಕರ್ಣದ ಅಶೋಕಾವನದಲ್ಲಿ ವಿಷ್ಣುಗುಪ್ತ~ ವಿಶ್ವವಿದ್ಯಾಪೀಠ ಸ್ಥಾಪನೆಗೊಳ್ಳಲಿದೆ . ಈ ವಿಶ್ವ ವಿದ್ಯಾಪೀಠದ ಪ್ರಸಾರ ,ಸಂಪರ್ಕದ ಉದ್ದೇಶದ ಮಾಹಿತಿ ಕೇಂದ್ರವು  ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ದಿನಾಂಕ 03.10.2019 ರಂದು ಶ್ರೀ ಮಹಾಬಲೇಶ್ವರ
 ದೇವರಿಗೆ ಅಭಿಷೇಕ, ಪೂಜೆಗೈದು,ಮಾಹಿತಿ ಕೇಂದ್ರದಲ್ಲಿ ದೀಪ ಬೆಳಗುವ ಮೂಲಕ ಶುಭಾರಂಭಗೊಂಡಿತು .

RELATED ARTICLES  ಸೆ. 3 ರಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ 15ನೇ ವರ್ಷದ ಪಟ್ಟಾಭಿಷೇಕ : ವಿಜೃಂಭಣೆಯಿಂದ ನಡೆಯಲಿದೆ ಕಾರ್ಯಕ್ರಮ.


ಈ ಸಂದರ್ಭದಲ್ಲಿ ವಿಷ್ಣುಗುಪ್ತ~ ವಿಶ್ವವಿದ್ಯಾಪೀಠದ ವ್ಯವಸ್ಥಾ ಸಮಿತಿಯ  ಗೌರವಾಧ್ಯಕ್ಷ ಶ್ರೀ ಡಿ .ಡಿ. ಶರ್ಮಾ , ಅಧ್ಯಕ್ಷರಾದ ಡಾ. ವೈ ವಿ ಕೃಷ್ಣಮೂರ್ತಿ , ಪ್ರಧಾನ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಪ್ಪು , ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶ್ರೀಕಲಾ ಸುಬ್ರಹ್ಮಣ್ಯ ಶಾಸ್ತ್ರಿ, ಕಾರ್ಯಾಲಯ ಕಾರ್ಯದರ್ಶಿ ಶ್ರೀ ಆರ್. ಎಸ್  .ಹೆಗಡೆ ಕುಮಟಾ , ಶ್ರೀ ವಿಜಯಕುಮಾರ್, ಉಪಾದಿವಂತ ಮಂಳಿಯ ವೇ.ಮೂ.ಸೀತಾರಾಮ ಉಪಾಧ್ಯಾಯ, ಶ್ರೀ ರಮೇಶ ಪ್ರಸಾದ , ಉಪಾಧಿವಂತ ಮಂಡಳಿಯ ಹಲವು ಸದಸ್ಯರು ಮತ್ತು ದೇವಾಲಯದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

RELATED ARTICLES  ಉದ್ಘಾಟನೆಗೊಂಡಿತು ಸಂಡೇ ಮಾರುಕಟ್ಟೆಯ ಬಳಿ ಹೊಸ ಬಸ್ ನಿಲ್ದಾಣ.


ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಪ್ರಭಾರ ಆಡಳಿತಾಧಿಕಾರಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ಶುಭಾಶಂಸನೆಗೈದರು