ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಎಲ್ಲಾ ಅಂಗ
ಸಂಸ್ಥೆಗಳು ಸೇರಿ, ದೇಶದ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು
ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.
ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು
ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಸ್ವತಂತ್ರ
ಪ್ರಜೆಗಳಾದ ಈ ದೇಶದ ನಾವು, ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿದು
ಅದನ್ನು ಸರಿಯಾದ ಮಾರ್ಗದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಈ
ದೇಶದಲ್ಲಿ ಕಲಿತು, ಪ್ರತಿಭಾ ಪಲಾಯನವಾಗದೆ ವಿದ್ಯಾರ್ಥಿಗಳು ತಮ್ಮ
ಪ್ರತಿಭೆಯನ್ನು ಈ ದೇಶಕ್ಕೇ ಮೀಸಲಿಡಬೇಕು. ದೇಶದ ನೆಲ, ಜಲ, ಹಾಗೂ
ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹುತಾತ್ಮರನ್ನು ಗೌರವಿಸಬೇಕೆಂಬ
ಸಂದೇಶ ನೀಡುತ್ತಾ, ಕೃಷಿಗೆ ಪ್ರಾಧಾನ್ಯತೆÉ ನೀಡಿ, ಪ್ರಧಾನ ಮಂತ್ರಿಗಳ
ಮೇಕ್-ಇನ್-ಇಂಡಿಯಾ ಹಾಗೂ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ-ಜೋಡಿಸಿ
ಎಂದೂ ಕರೆ ನೀಡಿದರು.
ಸಂಸ್ಥೆಯ ವಿಶ್ವಸ್ಥರುಗಳಾದ ಶ್ರೀ ಡಿ.ಡಿ.ಕಾಮತ, ಶ್ರೀ ರಮೇಶ
ಪ್ರಭು, ಶ್ರೀ ವಿಶ್ವನಾಥ ಕಿಣಿ, ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳ
ಮುಖ್ಯಸ್ಥರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ವಿದ್ಯಾರ್ಥಿಗಳು,
ಪಾಲಕರು ಉಪಸ್ಥಿತರಿದ್ದರು. ದೇಶಭಕ್ತಿಯ ಕುರಿತು ಆಯೋಜಿಸಲಾಗಿದ್ದ
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ
ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ಪ್ರಕಾಶ ಗಾವಡಿ ವಂದಿಸಿದರು.
ವಿದ್ಯಾರ್ಥಿಗಳು ರಾಷ್ಟøಗೀತೆ, ವಂದೇ ಮಾತರಂ, ರೈತಗೀತೆ,
ದೇಶಭಕ್ತಿಗೀತೆಗಳನ್ನು ಹಾಡಿದರು