ಕುಮಟಾ: ಯು.ಎಸ್.ಎಸ್.ಆರ್. ಅಸ್ರ್ಟ್‍ವೈಲ್‍ನಿಂದ ಅಕ್ಟೋಬರ್ 04, 1957 ರಂದು ಉಡಾಯಿಸಲ್ಪಟ್ಟ “ಸ್ಪುಟ್ನಿಕ್”ನ ಸ್ಮರಣಾರ್ಥ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ವಿಶ್ವದ ಎಲ್ಲಾ ರಾಷ್ಟ್ರಗಳು ಅಕ್ಟೋಬರ್ 4 ರಿಂದ 10ರವರೆಗೆ ‘ವಿಶ್ವ ಬಾಹ್ಯಾಕಾಶ ಸಪ್ತಾಹ’ವನ್ನು ಆಚರಿಸುತ್ತಿವೆ. ಇದರ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇವರು ಕರ್ನಾಟಕದ ಕೆಲವೇ ಕೆಲವು ಆಯ್ದ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು
ಹಮ್ಮಿಕೊಂಡಿದ್ದು, ಜನಜೀವನವನ್ನು, ಸಮಾಜವನ್ನು ಉನ್ನತೀಕರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಇಸ್ರೋದ ವಿಜ್ಞಾನಿ
ಎಚ್.ಎನ್.ಸುರೇಶಕುಮಾರ ಅಭಿಪ್ರಾಯಪಟ್ಟರು.


ದಿ. 05-10-2019 ಶನಿವಾರ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಜರುಗಿದ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪಗ್ರಹ ಉಡಾವಣೆ ಹಾಗೂ ಅದರ ಮಹತ್ವ ಮತ್ತು ಲಾಭಗಳ ಕುರಿತು ಜನ ಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವುದು ನಮ್ಮ ಘನ ಉದ್ದೇಶವಾಗಿದ್ದು ಅದಕ್ಕಾಗಿ ಈ ಸಪ್ತಾಹವನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ಅದಕ್ಕೆ ಸಂಬಂಧಿಸಿದ ಪಿಪಿಟಿ ಪ್ರೆಸೆಂಟೇಶನ್ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ವ್ಯೋಮ ವಿಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಮನಮುಟ್ಟುವಂತೆ
ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಧೆಯ
ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, ಇಸ್ರೋ ನಮ್ಮ ಶಾಲೆಗೆ ಆಗಮಿಸಿರುವುದು
ನಮ್ಮ ಸಂಸ್ಧೆಯ ಸೌಭಾಗ್ಯ ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿಗಳಾದ ಶ್ರೀ
ಮುರಳಿಧರ ಪ್ರಭು ಸಂಸ್ಥೆಯ ಪರವಾಗಿ ಪ್ರಾಸ್ಥಾವಿಕವಾಗಿ ಮಾತನಾಡಿ. ಶಿಕ್ಷಣ ರಂಗದಲ್ಲಿ
ರಾಜ್ಯಮಟ್ಟದ ದಾಖಲೆಯನ್ನು ಮಾಡಿರುವ ನಮ್ಮ ಸಂಸ್ಥೆಯ ಸಿ.ವಿ.ಎಸ್,.ಕೆ ಪ್ರೌಢಶಾಲೆಯನ್ನು
ಈ ಕಾರ್ಯಕ್ರಮಕ್ಕೆ ಇಸ್ರೋ ಆಯ್ಕೆ ಮಾಡಿಕೊಂಡಿರುವುದು ನಮಗೆಲ್ಲಾ ಅತೀವ ಅಭಿಮಾನ
ಮತ್ತು ಸಂತೋಷದ ವಿಷಯವಾಗಿದೆ. ಇಸ್ರೋದ ಬಗ್ಗೆ ನಮಗೆ ಅಪಾರ ಪ್ರೀತಿ, ಹೆಮ್ಮೆ, ಗೌರವ
ಇದ್ದು ಇದು ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ ಎಂದು ಅಣಕಿಸುತ್ತಿರುವ
ವಿದೇಶಿಯರ ಮಾತನ್ನು ಸುಳ್ಳಾಗಿಸಿ ಉಪಗ್ರಹ ಹಾರಿಸುವ ದೇಶವೆಂಬ ಖ್ಯಾತಿಯನ್ನು
ವಿಶ್ವಮಟ್ಟದಲ್ಲಿ ತಂದು ಕೊಟ್ಟಿದೆ. ನಮ್ಮ ಸಂಸ್ಥೆಯು ಪ್ರತಿ ವರ್ಷವೂ ದೀಪಾವಳಿ ಮೇಳದ ಸಂದರ್ಭದಲ್ಲಿ ದೇಶವನ್ನು ರಕ್ಷಿಸುವ ಸೈನಿಕರನ್ನು ಸನ್ಮಾನಿಸುತ್ತ ಬಂದಿದ್ದು, ಇಂದು ಇಸ್ರೋದ ಹದಿನೈದು ವಿಜ್ಞಾನಿಗಳು ಕೊಂಕಣದ ಅಂಗಳದಲ್ಲಿ ಉಪಸ್ಥಿತರಿರುವುದು
ನಮ್ಮೆಲ್ಲರ ಸೌಭಾಗ್ಯ. ಸಂಸ್ಥೆ ಜಿಲ್ಲೆಯ ಪರವಾಗಿ ಈ ಎಲ್ಲರನ್ನೂ ಗೌರವ ಅಭಿಮಾನದಿಂದ ಈ
ಕಾರ್ಯಕ್ರಮದಲ್ಲಿ ಸನ್ಮಾನಿಸಿ ಧನ್ಯತೆಯನ್ನು ಪಡೆಯಲಿದೆ ಎಂದರು.

RELATED ARTICLES  ಮಣಿಪಾಲ: ಆಸರೆಗೆ ವಿಕ್ಟೋರಿಯಾ ಫುಟ್ ಬಾಲ್ ಅಕಾಡೆಮಿಯಿಂದ ವೀಲ್ ಚೇರ್ ಕೊಡುಗೆ


ಹಿರಿಯ ವಿಜ್ಞಾನ ಶಿಕ್ಷಕರಾದ ಶ್ರೀ ಎಚ್.ಆರ್.ರವಿಶಂಕರ ಅವರು ಸಂಸ್ಥೆಯ ಪರವಾಗಿ ಕಾರ್ಯಕ್ರಮಕ್ಕೆ ಆಗಮಿಸಿರುವ ಸರ್ವರನ್ನೂ ಸ್ವಾಗತಿಸಿ ಎಲ್ಲಾ ವಿಜ್ಞಾನಿಗಳ ಕಿರು ಪರಿಚಯ ಮಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸಭಾಧ್ಯಕ್ಷರಾದ ಶ್ರೀ ವಿಠ್ಠಲ
ಆರ್.ನಾಯಕರವರು ಇದು ಸಂಸ್ಥೆಯ ಪಾಲಿಗೆ ಬಯಸದೇ ಬಂದ ಭಾಗ್ಯವಾಗಿದ್ದು ಇದರ
ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ಭಾರತವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯಬೇಕೆಂದು ಕರೆ ನೀಡಿದರು.

RELATED ARTICLES  ಇತರರಿಗೆ ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಧೀರೂ


ಸಭೆಯಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿಯರಾದ ಶ್ರೀಮತಿ ಸುಮಾ ಪ್ರಭು
ಉಪಸ್ಥಿತರಿದ್ದರು. ಇಸ್ರೋ ವಿಜ್ಞಾನಿಗಳಾದ ಸುರೇಶಕುಮಾರ ನೇತೃತ್ವದಲ್ಲಿ,
ಕೆ.ವಿ.ಮುರಲೀಧರ, ಎನ್.ಶ್ರೀಧರ, ಸುಬ್ರಹ್ಮಣ್ಯ ಭಟ್ಟ, ಡಾ.ಅರವಿಂದ ಕುಮಾರ,
ಎಸ್.ಆರ್.ನಾಗರಾಜ, ಹೇಮಂತ್, ಡಾ.ರಾಧಾಕೃಷ್ಣ, ಶ್ರೀಮತಿ ಪ್ರಮೋದಾ ಹೆಗಡೆ, ಶ್ರೀಮತಿ ಉಷಾ
ಬಿ.ಆರ್., ಶ್ರೀಮತಿ ಅಶ್ವಿನಿ, ಶ್ರೀಮತಿ ಸುಮನ್ ವಾಳ್ಕೆ, ಶ್ರೀಮತಿ ಚೈತ್ರಾ ರಾವ್, ಡಾ.ಗಿರೀಶ
ಗೌಡರವರನ್ನು ಒಳಗೊಂಡ ವಿಜ್ಞಾನಿಗಳಿಂದ ವಿದ್ಯಾರ್ಥಿಗಳಿಗೆ ವ್ಯೋಮ ವಿಜ್ಞಾನ ಮತ್ತು
ಬಾಹ್ಯಾಕಾಶ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆ ನೆರವೇರಿತು. ಸುಮಾರು 20ಕ್ಕೂ ಹೆಚ್ಚು
ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗಾಗಿ
ರಸಪ್ರಶ್ನೆ, ಆಶುಭಾಷಣ, ಪೋಸ್ಟರ್ ಪ್ರದರ್ಶನದಂತಹ ವಿವಿಧ ಸ್ಪರ್ಧೆಗಳನ್ನು
ನೆರವೇರಿಸಿ ಸ್ಪರ್ಧಾವಿಜೇತರಿಗೆ ಇಸ್ರೋ ವತಿಯಿಂದಲೇ ಬಹುಮಾನವÀನ್ನು ವಿತರಿಸಲಾಯಿತು.
ಈ ವೇಳೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿಗಳಾದ ಶ್ರೀ ರಮೇಶ ಪ್ರಭು, ರಾಮನಾಥ
ಕಿಣಿ, ಡಿ.ಡಿ.ಕಾಮತ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ಅಮಿತಾ ಧನ್ಯವಾದ ಸಮರ್ಪಿಸಿದರೆ,
ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು. ಶಿಲ್ಪಾ ಸಂಗಡಿಗರು ಸುಶ್ರಾವ್ಯವಾಗಿ ಹಾಡಿದ ಪ್ರಾರ್ಥನೆ
ಇಸ್ರೋ ವಿಜ್ಞಾನಿಗಳಿಂದ ಶ್ಲಾಘಿಸಲ್ಪಟ್ಟಿತು.