ಕುಮಟಾ : ತಾಲೂಕಿನ ಕತಗಾಲನ ಅಳ್ಕೋಡ ಸಮೀಪ ಅಪಘಾತ ಸಂಭವಿಸಿದೆ.

ರಸ್ತೆ ಬದಿಯಲ್ಲಿರುವ ತಡೆಗೋಡೆಗೆ ಟವೇರಾ ಕಾರು ಗುದ್ದಿದ ಪರಿಣಾಮ ಕಾರು ಪಲ್ಟಿ ಹೊಡೆದ ಘಟನೆ ನಡೆದಿದೆ.

ಕಾರು ತಡೆಗೋಡೆಗೆ ಗುದ್ದಿದ ಪರಿಣಾಮ
ಕಾರಿನ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಸವಾರರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

RELATED ARTICLES  ರಸ್ತೆಯಲ್ಲಿ ಹೊಂಡದ ರಾಶಿ: ಬಾಳಿಗಾ ಕಾಲೇಜಿನ ವಿದ್ಯಾರ್ಥಿಗಳು ಮನವಿ

ಪ್ರಯಾಣಿಕರು ಆಂದ್ರ ಮೂಲದವರೆಂದು ಹೇಳಲಾಗುತ್ತಿದ್ದು ಶಿರಶಿ ಮಾರ್ಗವಾಗಿ ಗೋಕರ್ಣ ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸಮಯದಲ್ಲಿ ಹೈವೆ ಪಟ್ರೋಲ್ ಗಾಡಿ ಈ ಮಾರ್ಗವಾಗಿ ಸಂಚರಿಸುತ್ತಿರುವಾಗ ಇದನ್ನು ಗಮನಿಸಿದ ಪೋಲೀಸ್ ಸಿಬ್ಬಂದಿಗಳು ಗಾಯಾಳುಗಳನ್ನು ಅಂಬುಲೆನ್ಸಗಾಗಿ ಕಾಯದೇ ತಮ್ಮ ಹೈವೇಪಟ್ರೋಲ್ ವಾಹನದಲ್ಲಿಯೇ ತಂದು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರದಿದ್ದಾರೆ..

RELATED ARTICLES  ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ನಾಪತ್ತೆ