ಕಾರವಾರದ ಪಹರೆ ವೇದಿಕೆಯ ಸ್ವಚ್ಛಾಸೇವಾ ವಿಭಾಗದಿಂದ 03 – 01 – 2015 ರಿಂದ ಪ್ರಾರಂಭವಾದ ಸ್ವಚ್ಛತಾ ಕಾರ್ಯಕ್ರಮವು, ಮಳೆಗಾಲ ಚಳಿಗಾಲ ಬೇಸಿಗೆಕಾಲ ಎನ್ನದೆ ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ಶ್ರಮಿಸುತ್ತಾ ಈಗ 250 ವಾರಗಳನ್ನು ಪೂರೈಸಿದೆ.

ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಾದ ಡಾ.ಹರೀಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಮೊಹಮ್ಮದ್ ರೋಷನ್ ಅವರು ದಿನಾಂಕ 05/10/2019 ರಂದು ನಡೆದ 250ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

RELATED ARTICLES  ರೈತರಿಗಾಗಿ ಬಂದ ಲಕ್ಷಗಟ್ಟಲೇ ಹಣ ಗುಳುಂ? ದ್ವಿತೀಯ ದರ್ಜೆ ಗುಮಾಸ್ತನಿಂದ ರೈತರಿಗೆ ವಂಚನೆ

ಪಹರೆ ವೇದಿಕೆಯ ಈ ನಿರಂತರ ಕಾರ್ಯವು ಪರಿಸರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಪರಿಣಾಮ ಬೀರಿದೆ. ಅಲ್ಲದೆ ಪಹರೆಯು ಇತರರಿಗೆ ಸ್ವಚ್ಛತಾ ಕಾರ್ಯದಲ್ಲಿ ತಾವೂ ಭಾಗಿಯಾಗಲು ಪ್ರೇರಣೆಯನ್ನು ಒದಗಿಸಿದೆ.

ಈ ಕಾರ್ಯಕ್ರಮ ಯಶಸ್ವಿಯಾಗಲು ಪಹರೆಯ ಎಲ್ಲಾ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಅವರೆಲ್ಲರಿಗೆ ಹಾಗೂ ಪಹರೆ ವೇದಿಕೆಯ ಕೇಂದ್ರಬಿಂದು ಶ್ರೀ ನಾಗರಾಜ್ ನಾಯಕರಿಗೆ ಅಭಿನಂದನೆಗಳು.

RELATED ARTICLES  ಕೊರೋನಾದಿಂದ ಉತ್ತರಕನ್ನಡದಲ್ಲಿ ಮತ್ತೊಂದು ಸಾವು..! ಶಿರಸಿ ಮೂಲದ ವ್ಯಕ್ತಿಯನ್ನು ಬಲಿಪಡೆದ ಕೊರೋನಾ…!

ಅಮಿತಾಬ್ ಬಚ್ಚನ್ ಅಭಿನಯದ ‘ಶೋಲೆ’ ಚಲನಚಿತ್ರವು ನಿರಂತರವಾಗಿ ಐದು ವರ್ಷಗಳು ಭರ್ಜರಿ ಪ್ರದರ್ಶನಗೊಂಡಿತ್ತು. ಆದರೆ ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯವು ಇನ್ನು ಕೆಲವೇ ವಾರಗಲ್ಲಿ ಐದು ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಲಿದ್ದು, ಮುಂದೆಯೂ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಣೆ ಮುಂದುವರಿಸಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.