ಕುಮಟಾ: ಪಟ್ಟಣದ ಮಹಾಲಕ್ಷ್ಮಿ ಕಂಫರ್ಟ್ನಲ್ಲಿ
ಭಾನುವಾರ ನೂತನವಾಗಿ ಆರಂಭವಾದ ನವೀನ ನೇತ್ರಾಲಯವನ್ನು ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರಾಲಯದ ನಿರ್ದೇಶಕ ಡಾ.ಶ್ರೀನಿವಾಸ ಜೋಶಿ ಉದ್ಘಾಟಿಸಿದರು.


ನಂತರ ಮಾತನಾಡಿ, ವೈದ್ಯಕೀಯ ಸೇವೆ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಣೆಯಾಗಿ ಬಡ ರೋಗಿಗಗಳ ಸೇವೆ ಮಾಡುವುದು ವೈದ್ಯರ ಕರ್ತವ್ಯ. ಮುಂದಿನ ದಿನಗಳಲ್ಲಿ ನವೀನ ನೇತ್ರಾಲಯದ ವೈದ್ಯ ಡಾ.ನವೀನ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಕುಮಟಾ ತಾಲೂಕನ್ನು ಅಧತ್ವ ಮುಕ್ತ ತಾಲೂಕು ಎಂದು ಘೋಷಣೆ ಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

RELATED ARTICLES  ಹೊನ್ನಾವರದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ.

ನಮಸ್ಕಾರ ಸಮಾಜ ಸೇವಾ ಸಮಿತಿ ಅಧ್ಯಕ್ಷ ಸೂರಜ ನಾಯ್ಕ ಸೋನಿ, ನಿವೃತ್ತ ಪೊಲೀಸ್ ಅಧಿಕಾರಿ ವಿರೇಶ ಬೆಳವಡಿ, ಐ.ಎಂ.ಎ ಕುಮಟಾ ಘಟಕದ ಅಧ್ಯಕ್ಷೆ ಡಾ.ಚೈತ್ರಾ ನಾಯ್ಕ, ಡಾ.ಪ್ರಸನ್ನ ನಾಯ್ಕ, ನವೀನ‌ ನೇತ್ರಾಲಯದ ಡಾ.ನವೀನ ಬೆಳವಡಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಜನತೆಯ ಮನವಿಗೆ ಸ್ಪಂದಿಸಿದ ಶಾರದಾ ಶೆಟ್ಟಿ: ಕಡ್ಲೆ ತೀರದಲ್ಲಿ ಮೀನುಗಾರಿಕಾ ರ್ಯಾಂಪ್ ನಿರ್ಮಾಣಕ್ಕೆ ಚಾಲನೆ