ಭಟ್ಕಳ ಎಜುಕೇಶನ್ ಟ್ರಸ್ಟನ ಆಶ್ರಯದಲ್ಲಿ ಗಜಾನನ ಗಣಪತಿ ಕೊಲ್ಲೆ ರಾಯ್ಕರ ಫೌಂಡೇಶನ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ನಡೆಯಿತು. ಭಟ್ಕಳ ಎಜುಕೇಶನ್ ಟ್ರಸ್ಟನ ಅಂಗ ಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕೊಂಕಣಿ ಭಾಷಾ ಅಲ್ಪಸಂಖ್ಯಾತ ದೈವಜ್ಞ ಬ್ರಾಹ್ಮಣ ಹಾಗೂ ಇತರೆ ಅರ್ಹ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.

RELATED ARTICLES  ಬೈಕ್ ಅಪಘಾತದಲ್ಲಿ ಜರ್ಮನ್ ವ್ಯಕ್ತಿ ಸಾವು

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ ಇವರು ಮಾತನಾಡಿ ಇಂದಿನ ಯುವಜನತೆ ಮೌಲ್ಯಯುತ ಶಿಕ್ಷಣವನ್ನು ಪಡೆದು ಸಮಾಜದ ಹಾಗೂ ದೇಶದ ಏಳ್ಗೆಗೆ ಶ್ರಮಿಸಬೇಕು ಎಂದು ಕರೆನೀಡಿದರು. ನಾಡಿನ ಪ್ರಖ್ಯಾತ ವಾಗ್ಮಿ, ಯುವ ತಂತ್ರಜ್ಞ ರಾಹುಲ್ ರಘುವೀರ್ ಕೊಲ್ಲೆಯವರು ವಿದ್ಯಾರ್ಥಿಗಳಿಗೆ ನಾಯಕತ್ವದ ಕೌಶಲ್ಯದ ಕುರಿತು ಮನಮುಟ್ಟುವಂತೆ ಉಪನ್ಯಾಸ ನೀಡಿದರು.

RELATED ARTICLES  ಅಘನಾಶಿನಿ ನದಿಯಲ್ಲಿನ ಚಿಪ್ಪು ತೆಗೆದು ನಡೆಸುತ್ತಿದ್ದ ಗಣಿಗಾರಿಕೆಗೆ ಬೇಕ್..?

ಅಧ್ಯಕ್ಷರು ಬಿಇಟಿ ಡಾ. ಸುರೇಶ ನಾಯಕ್, ಟ್ರಸ್ಟಿ ಮ್ಯಾನೇಜರರಾದ ರಾಜೇಶ ನಾಯಕ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಊರ ನಾಗರೀಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ವಿಶ್ವನಾಥ್ ಭಟ್ ಹಾಗೂ ಉನ್ನತಿ ಬಡಾಲ್ ನಿರೂಪಿಸಿದರು.