ಭಾರತೀಯ ಗೋ ಪರಿವಾರ ಉತ್ತರಕನ್ನಡ ಇದರ ಸಂಯೋಜನೆಯಲ್ಲಿ ಅಭಯಾಕ್ಷರ ಅಭಿಯಾನದ ಪ್ರಾರಂಭೋತ್ಸವ ಹಾಗೂ ಹಾಲು ಹಬ್ಬ ಕಾರ್ಯಕ್ರಮ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಆವಾರದಲ್ಲಿ ನಡೆಯಿತು.

ಗೋ ಮಾತೆಯ ವಾತ್ಸಲ್ಯಾಮೃತ ಕುಡಿಯುವುದರ ಜೊತೆಗೆ ಗೋಕುಲದುಳಿವಿಗಾಗಿ ನಮ್ಮ ಹಸ್ತಾಕ್ಷರ ನೀಡುವ ವಿಶೇಷ ಕಾರ್ಯಕ್ರಮ ಇದಾಗಿತ್ತು.

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಉದ್ಘಾಟಿಸಿದರು. ಶ್ರೀಗಳು ದೇಶಕ್ಕಾಗಿ ಮಾಡಿದ ಸೇವೆ ಅನನ್ಯವಾದುದು. ಇಲ್ಲಿರುವ ಜನರೆಲ್ಲರೂ ಮಹಾನ್ ಮಹಾನ್ ವ್ಯಕ್ತಿಗಳು. ಮಾತು ಕಡಮೆ ಕೆಲಸ ಜಾಸ್ತಿ ಆಗಬೇಕು. ಗೋ ಮಾತಾ ಎಂಬುದಕ್ಕೆ ಅನನ್ಯ ಶಕ್ತಿ ಇದೆ. ಸಾವಿರ ಸಾವಿರ ಜನರಿಗೆ ಹಾಲೂಡಿದ ತಾಯಿ ಆಕೆ. ತಾಯಿ ಮತ್ತು ಗೋ ತಾಯಿಗೆ ನಮಿಸಿದಷ್ಟೂ ಕಡಿಮೆಯೇ ಎಂದರು.ಗೋ ಮಾತೆ ನಂಬಿದವರಿಗೆ ಎಲ್ಲರಿಗೂ ಒಳಿತಾಗಲಿ .ಗುರು ಕಾರ್ಯಕ್ಕೆ ನಾವೆಂದೂ ಬದ್ಧರು ಎಂದರು.

ಎಲ್ಲಾ ತಾಲೂಕಾ ಪದಾಧಿಕಾರಿಗಳ ಮೂಲಕ ತಾಲೂಕಾವಾರು ಅಭಯಾಕ್ಷರ ಪ್ರತಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಾಜರಿದ್ದ ಪ್ರಮೋದ ಹೆಗಡೆ ಮಾತನಾಡಿ ಮಕ್ಕಳು ಹಾಡಿದ ಗೋ ಗೀತೆ ಅದ್ಬುತ, ಗೋವಿನ ಬಗ್ಗೆ ಮಾತಾಡುವಾಗ ಕಣ್ಣಂಚಲ್ಲಿ ನೀರು ಬರುತ್ತಿದೆ. ಸಮಾಜಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ಪ್ರಮೋದ ಮುತಾಲಿಕ್ ಒಬ್ಬ ಸಮಾಜ ಸೈನಿಕ ಎಂದರು. ಭಾರತಕ್ಕೆ ಸಾವಿರ ವರ್ಷದ ದಾಸ್ಯ ಇತಿಹಾಸ ಆದರೆ ಬಾರತವನ್ನು ಒಂದುಗೂಡಿಸುವುದು ಸಧ್ಯದ ಪ್ರಸ್ತುತತೆ. ಜಗತ್ತು ಇರಬೇಕೆಂದರೆ ಭಾರತ ಒಂದಾಗಬೇಕು ,ರಾಮಾಯಣ ಮಹಾಭಾರ ಅಖಂಡ ಭಾರತದ ಕಲ್ಪನೆ ಕೊಟ್ಟಿದೆ. ಒಂದು ಗಾಂಧೀ ಚರಕ ಭಾರತವನ್ನು ಒಟ್ಟಿಗೆ ಸೇರಿಸಿದೆ. ಭಾರತವನ್ನು ಒಂದುಗೂಡಿಸಲು ರಾಮಚಂದ್ರಾಪುರ ಮಠದ ಶ್ರೀಗಳು ಗೋವಿನ ಸೂತ್ರ ಅನುಸರಿಸುತ್ತಿದ್ದಾರೆ. ಉಸಿರಾಡುವ ಗಾಳಿ ಒಂದೇ ಬದುಕುವ ನಮ್ಮ ಜಗತ್ತು ಸೇರಿಸಲು ಒಂದೇ ಬಣ್ಣದ ಹಾಲಿಂದ ಮಾತ್ರ ಸಾಧ್ಯ ಎಂದರು. ಗೋವಿನ ಮೂಲಕ ಜಗತ್ತನ್ನು ಒಂದೆಡೆ ಸೇರಿಸಿದ ಸಂತ ಮಹಾಂತ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಎಂದು ಭಾವುಕರಾಗಿ ನುಡಿದರು.

RELATED ARTICLES  ಕುಮಟಾ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ "ಹದಿಹರಯದ ತಲ್ಲಣ ಖಿನ್ನತೆಗೆ ದಾರಿಯಾಗದಿರಲಿ" ವಿಶೇಷ ಉಪನ್ಯಾಸ ಕಾರ್ಯಕ್ರಮ

IMG 20170815 163217

ಮುಖ್ಯ ಅತಿಥಿಗಳಾಗಿ ಹಾಜರಿದ್ದ ಪ್ರಮೋದ ಮುತಾಲಿಕ್ ಮಾತನಾಡಿ ಇಡೀ ದೇಶವನ್ನು ಉಳಿಸುವ ಗೋವನ್ನೇ ಉಳಿಸುವ ಹೋರಾಟ ಇದು. ಸ್ವಾತಂತ್ರ್ಯ ಸಿಕ್ಕಿದ ನಂತರದಲ್ಲಿಯೂ ಆಂದೋಲನ ಮಾಡಬೇಕಾಗಿ ಬಂದಿದ್ದು ವಿಪರ್ಯಾಸ. ನಾವು ಹಿಂದೆ ದಾಸ್ಯದಲ್ಲಿ ಇದ್ದೆವು ಈಗ ಹಾಗಲ್ಲ. ನನ್ನನ್ನು ಕತ್ತೆ ಎಂದರೂ ಪರವಾಗಿಲ್ಲ ಹಿಂದು ಎನ್ನದಿರಿ ಎನ್ನುವವರು ನಮ್ಮನ್ನಾಳುವವರಾಗಿದ್ದಾರೆ ಇದು ಬೇಸರದ ಸಂಗತಿ. ಇಡೀ ಜಗತ್ತಿಗೇ ಮಾದರಿ ದೇಶವಾಗಿ ಭಾರತವನ್ನು ಮಾಡುವಲ್ಲಿ ಶ್ರೀಗಳು ಮತ್ತೊಂದು ಕ್ರಾಂತಿ ಮಾಡುತ್ತಿದ್ದಾರೆ.ಗೋ ಪ್ರಾಣಿಯಲ್ಲ ಅದು ಮಾತಾ ಸ್ವರೂಪದಲ್ಲಿದೆ. ಇಡೀ ದೇಶ ಸಮೃದ್ಧವಾಗುವಲ್ಲಿ ಶ್ರೀಗಳ ಮಾತು ರೋಮಾಂಚನವಾಗುತ್ತದೆ. ಕರ್ನಾಟಕವನ್ನು ಅವಲೋಕಿಸಿದರೆ ಮಠಗಳು ಶಾಲಾ ಕಾಲೇಜು ಸ್ಥಾಪಿಸುತ್ತಿದ್ದರೆ ಅವರ ಮಧ್ಯೆಯೇ ಎಂತಹುದೇ ಕಷ್ಟ ನೋವು ಬಂದರೂ ಎದೆ ಸೆಟೆದು ನಿಂತ ಶ್ರೀಗಳು ಮಾತ್ರ ಅಪ್ರತಿಮರು. ಅವರು ಒಮ್ಮೊಮ್ಮೆ ಗೋವಿಗಾಗಿ ನಾವು ಪ್ರಾಣ ಕೊಡಲು ಸಿದ್ದ ಎಂದಾಗ ನೋವಾಗುತ್ತೆ. ಗೋವಿಗಾಗಿ ಪ್ರಾಣಕೊಡಲು ಪ್ರಾಣ ಪಡೆಯಲು ನಾವೆಲ್ಲ ಇದ್ದೇವೆ ,ಶ್ರೇಷ್ಠ ಶ್ರೀಗಳು ಆಶೀರ್ವಾದ ಮಾಡಿದರೆ ಸಾಕು ನಾವು ಬದುಕನ್ನು ಗೋವಿಗೆ ನೀಡಲು ಸಿದ್ದ ಎಂದರು. ಯಾವುದೇ ಕಾನೂನು ಏನೂ ಮಾಡಲಾಗದ ಅದೆಷ್ಟೋ ಸಮಸ್ಯೆ ಇಲ್ಲಿದೆ ಅಂತಹ ಸಮಸ್ಯೆ ನಿವಾರಣೆಗೆ ನಾವು ಮುಂದಾಗಬೇಕು. ದೇಶದ್ರೋಹಿಗೆ ಜೈಕಾರ ಹಾಕುವ ನಮ್ಮವರ ಮೂಲಕ ತಿಂದಾನ್ನಕ್ಕೆ ಮೋಸ ನಡೆದಿರುವುದು ಖಂಡನೀಯ.ಅಪ್ಸಲ್ ಗುರು ವಿಗೆ ಜೈಕಾರ ಹಾಕುತ್ತೆ ಎಂದಾಗ ಆಘೋಷಣೆ ನಮ್ಮ ಎದೆಯ ಮೇಲೆ ಹಾಕಿದಂತೆ ಆಗುವುದು.

RELATED ARTICLES  ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಸೇವಂತಿಗೆ ತುಂಬಾ ಬೇಡಿಕೆ

ಗೋವಿನ ಮೂಲಕ ದೇಶ ಒಂದುಗೂಡಿಸಿದ ಶ್ರೀಗಳಿಗೆ ನಮನ ಸಲ್ಲಲೇ ಬೇಕು. ಗೋ ರಕ್ಷಕರು ಮೋಸಗಾರರಲ್ಲ. ಪೋಲೀಸರಿಗೆ ಗೋ ಕಳ್ಳತನ ಕಾಣಿಸದು ಅವರಿಗೆ ಪ್ರಮೋದ ಮುತಾಲಿಕ್ ಮಾತ್ರ ಕಾಣುತ್ತಾರೆ ಎಂದು ಟಾಂಗ್ ನೀಡಿದರು. ಗೋ ದ್ರೋಹಿಗಳು ತೊಲಗಬೇಕು ದೇಶ ಅಭಿವೃದ್ದಿ ಆಗುವುದಾದರೆ ಅದು ಗೋವಿನಿಂದ ಮಾತ್ರ ಸಾಧ್ಯ . ಶ್ರೀಗಳ ಕಾರ್ಯಕ್ಕೆ ಬೆಂಬಲ ನೀಡೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಮುರಳೀಧರ ಪ್ರಭು ಚಿಟ್ಟಣಿ ಒಬ್ಬ ಕಾಮಧೇನು ವ್ಯಕ್ತಿತ್ವದ ವ್ಯಕ್ತಿ ಅವರಿಗೆ ಅಭಿನಂದನೆ. ಗಾಂಧೀಜಿ ಸ್ವಾತಂತ್ರಾ ನಂತರ ಒಂದು ವರ್ಷದಲ್ಲಿ ಗೋ ವಧೆ ನಿಲ್ಲಿಸುತ್ತೇನೆ ಎಂದಿದ್ದರು ಆದರಿದು ಇಂದಿಗೂ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಭಟ್ಕಳ ಹೊನ್ನಾವರ ಶಾಸಕ ಮಂಕಾಳ ವೈದ್ಯ, ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಯಲ್ಲಾಪುರ,ಜಿಲ್ಲಾ ಗೋ ಪರಿವಾರದ ಅಧ್ಯಕ್ಷ ಅರುಣ ಬಾಂದೇಕರ,ಸುಬ್ರಾಯ ಭಟ್ಟ .ಪ್ರಕಾಶ ಭಟ್ಟ, ಕಿಶನ್ ವಾಳ್ಕೆ ಇನ್ನಿತರರು ಇದ್ದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.