ಹೊನ್ನಾವರ- ಉಳ್ಳವರು ಪ್ರಗತಿಪತದಲ್ಲಿ ಇರುವವರು ಹಿಂದೇಟು ಹಾಕಿದರೂ ಸಹ ಸಮಾಜದಲ್ಲಿ ನಿರ್ಗತಿಕರು, ಒಂಟಿ ಸದಸ್ಯರಿರುವ ಕುಟುಂಬ, ವಿಧವಾ ಪ್ರಧಾನ ಕುಟುಂಬ ಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದೆ.ಅಂತ ಕುಟುಂಬದವರ ಕಡೆ ನರೇಗಾದ ದಿಕ್ಕು ಸಾಗಬೇಕಿದೆ.ಆದಿಸೆಯಲ್ಲಿ ಇಚ್ಛಾಶಕ್ತಿಯ ಜೊತೆಗೆ ಅಧಿಕಾರಿಗಳು ಗಮನಹರಿಸಿದಲ್ಲಿ ಉದ್ಯೋಗ ಖಾತ್ರಿ ಯೋಜನೆ ಯಶಸ್ಸು ಕಾಣಬಹುದಾಗಿದೆ ಎಂದು ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಇಂದು ಶನಿವಾರ ಹೊನ್ನಾವರ ಪಂಚಾಯತ್ ಸಭಾ ಭವನದಲ್ಲಿ ನಡೆದ ೨೦೧೯-೨೦ ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದುಡಿಯುವ ಕೈಗಳಿಗೆ ಕೆಲಸ ಈ ಮಾತನ್ನು ಗಮನದಲ್ಲಿಟ್ಟುಕೊಂಡು ನಿಯಮಪಾಲಿಸಿದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಬಡ ಫಲಾನುಭವಿಗಳಿಗೆ ಅನೂಕೂಲ ಒದಗಿಸಿಕೊಡಬಹುದಾಗಿದೆ ಎಂದು ಮುಂಡಳ್ಳಿಯವರು ತಿಳಿಸಿದರು.ಜೊತೆಗೆ ಯೋಜನೆಯಲ್ಲಿ ಬರಬಹುದಾದ ಎಲ್ಲ ಕಾಮಗಾರಿಗಳ ಪರಿಚಯ ಮತ್ತು ಒದಗಿಸಬೇಕಾದ ದಾಖಲುಗಳ ಬಗ್ಗೆ ಸಭೆಯಲ್ಲಿ ಅವರು ತಿಳಿಸಿ ಹೇಳಿ, ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನೆ ಇಲಾಖೆಯ ರಾಜೇಶ್ ನಾಯಕ ಮಾತನಾಡಿ ನರೇಗ ಗ್ರಾಮೀಣ ಭಾಗದವರಿಗೆ ವರದಾನದಂತೆ ಎಂದರು.
ಅಭಿವೃದ್ಧಿ ಕೃಷ್ಣಾನಂದ ನಾಯಕ ಸ್ವಾಗತಿಸಿ ಪ್ರಸ್ತುತ ಅವದಿಯಲ್ಲಿ ಮಾಡಲಾದ ಕಾಮಗಾರಿಗಳನ್ನು ಓದಿದರು. ಪಂಚಾಯತ ಸಿಬ್ಬಂದಿ ಶ್ರೀಪಾದ ನಾಯ್ಕ ಈ ಹಿಂದಿನ ಸಭಾ ನಡಾವಳಿ ಓದಿದರು. ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಾಯ್ಕ ವೇದಿಯಲ್ಲಿ ಉಪಸ್ಥಿತರಿದ್ದರು. ಗ್ರಾಮಸಂಪನ್ಮೂಲ ವ್ಯಕ್ತಿಗಳಾದ ರಾಧಾ ವಿನಾಯಕ, ಅಜೀತ ಸಿಬ್ಬಂದಿಗಳಾದ ಶೇಷು, ರವಿ ,ನೀತಾ ಮೊದಲಾದವರು ಸಹಕರಿಸಿದರು.