ಎರಡನೆ ವರ್ಷದ ಶಾರದೋತ್ಸವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ,ವಿಶಿಷ್ಟವಾಗಿ, ಅಲ್ಲದೆ ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು. ಮಣ್ಣಿನಿಂದ ಮೂರ್ತಿಯನ್ನು ಮಾಡಿ, ಬಳಸಿ ಬಿಸಾಡಬೇಕಿದ್ದ ವಸ್ತುಗಳನ್ನು ಸೇರಿಸಿ ಗುಹೆಯನ್ನು ಮಾಡಿ ಭೂ ಪರಿಸರಕ್ಕೆ ಸಹಾಯಕಾರಿಯಾದರೆ, ಅಲ್ಲೆ ಹತ್ತಿರ ತಾತ್ಕಾಲಿಕ ನೀರಿನ ಟ್ಯಾಂಕ್ ಮಾಡಿ ಅದರಲ್ಲೆ ಆ ಮೂರ್ತಿಯ ವಿಸರ್ಜನೆ ಮಾಡಿ ಜಲಪರಿಸರದ ಸ್ವಚ್ಚತೆಗೆ ಸಹಕಾರಿಯಾಗಿದ್ದಾರೆ. ಚಿಕ್ಕಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಗಿದೆ ಪೂಜಾ ವಿಧಾನಗಳು ಸಹ ವಿಧವಾಗಿದ್ದು ಊರಿನ ಜನರು ಮನೆಯಿಂದನೆ ಆರತಿಯನ್ನು ತಂದು ದೇವರಿಗೆ ಬೇಳಗುವ ಮೂಲಕ ಊರಿನ ಎಲ್ಲಾ ಜನರ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಆಟಗಳನ್ನು ಆಡಿಸಿ ಎಲ್ಲರೂ ಸಂತೋಷ ಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಶಾರದೋತ್ಸವ ಎಲ್ಲರಿಗೂ ಒಂದು ಮಾದರಿಯ ಉತ್ಸವವಾಗಿ ಕಾಣಿಸಿದ್ದು, ಭಕ್ತಿಮಾರ್ಗಕ್ಕೆ ಹೆಚ್ಚಿನ ಪ್ರಾಸಸ್ಥ್ಯವನ್ನು ನೀಡಿದ್ದು ಕೂಡಾ ಇಲ್ಲಿ ವಿಶೇಷವಾಗಿತ್ತು.
ಮುಂದಿನ ದಿನದಲ್ಲಿ ಪ್ರತಿ ತಿಂಗಳು ಸ್ವಚ್ಚತೆಗಾಗಿ ಊರಿನ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಲಾಗುವದೆಂದು ಅಧ್ಯಕ್ಷರಾದ ಕೃಷ್ಣಮುಕ್ರಿ ತಿಳಿಸಿದರು.