ಭಟ್ಕಳ- ತಾಲ್ಲೂಕಿನಲ್ಲಿ ವಿಶಿಷ್ಟವಾಗಿ ಸಾಮಾಜಿಕ ಸಾಂಸ್ಕೃತಿಕ ವಾಗಿ ಗುರುತಿಸಿಕೊಂಡಿರುವ ಮುರುಡೇಶ್ವರದ ಸಿರಿಗನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶಾರಾದೋತ್ಸವದಲ್ಲಿ ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯದಿಂದ ಸೋಮವಾರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ರಾಘವೇಶ್ವರ ಸಭಾ ಭವನ ಬಸ್ತಿಮಕ್ಕಿ ಮುರುಡೇಶ್ವರದಲ್ಲಿ ನಡೆದ ನಿನಾದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿಯವರು ಹರಿಚರಣಕೆ ನಾ ಶರಣಾದೆ, ದಾಸರೆಂದರೆ ಪುರಂದರ ದಾಸರಯ್ಯ, ಹರೆ ವೆಂಕಟ ಶೈಲ ವಲ್ಲದ, ಯಾದವ ನೀ ಬಾ ಮೊದಲಾದ ದಾಸ ಸಾಹಿತ್ಯದ ಜೊತೆಗೆ ಅನೇಕ ಭಕ್ತಿ ಗೀತೆಗಳನ್ನು ತಮ್ಮ ಕಂಠಸಿರಿಯಲ್ಲಿ ಪ್ರಸ್ತುತ ಪಡಿಸಿದರು. ಇವರೊಂದಿಗೆ ವಿನಾಯಕ ಅಂಬಿಗ ಹೊನ್ನಾವರ ಅವರು ಇದ್ದರು.

RELATED ARTICLES  ಬಡವರ ಪಾಲಿಗೆ ಸಿಗುತ್ತಿಲ್ಲ 'ಬಡವರ ಬಾದಾಮಿ' ಬೆಳೆ


ತಬಲದಲ್ಲಿ ನವೀನ್ ಶೇಟ್ ಹೊನ್ನಾವರ ಹಾಗೂ ಹಾರ್ಮೋನಿಯಂನಲ್ಲಿ ಪರಮೇಶ್ವರ ಹೆಗಡೆ ಸಾಥ್ ನೀಡಿದರು.