ಕುಮಟಾ: ತಾಲೂಕಿನ ಕೆಲ ಪ್ರದೇಶಗಳಲ್ಲಿ ಕಾಡು ಹಂದಿ ಭತ್ತದ ಪೈರನ್ನು ನಾಶಮಾಡುತ್ತಿದೆ ಮತ್ತು ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುತ್ತಿದೆ. ಕಾಡುಪ್ರಾಣಿಗಳನ್ನು ಹತೋಟಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಹಾಯಕ ಉಪ ಅರಣ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

RELATED ARTICLES  ಧರ್ಮ ಸಮರದಲ್ಲಿ ರಾಮಭಟರಾಗಿ ಹೋರಾಡಿ: ರಾಘವೇಶ್ವರ ಶ್ರೀ ಕರೆ


ಧಾರೇಶ್ವರ, ಹಂದಿಗೋಣ, ವಕ್ಕನಳ್ಳಿ ಮತ್ತು ಹೊಲನಗದ್ದೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭತ್ತದ ಗದ್ದೆಗಳನ್ನು ಕಾಡು ಹಂದಿಗಳು ನಾಶಮಾಡುತ್ತಿವೆ. ಇದರಿಂದ ರೈತಾಪಿ ಸಮುದಾಯ ಕಂಗಾಲಾಗಿದ್ದು, ಕೂಡಲೇ ಅರಣ್ಯ ಇಲಾಖೆಯು ಹಂದಿಗಳನ್ನು ನಿಯಂತ್ರಣ ಮಾಡಬೇಕು ಎಂದು ಮನವಿ ಉಲ್ಲೇಖಿಸಲಾಗಿದೆ.

RELATED ARTICLES  ಅವೈಜ್ಞಾನಿಕ ಚತುಷ್ಪತ ಕಾಮಗಾರಿ : ಮನೆ,ಗದ್ದೆಗೆ ನುಗ್ಗಿದ ನೀರು..!


ಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಗ್ರಾ.ಪಂ ಅಧ್ಯಕ್ಷ ಎಸ್.ಟಿ. ನಾಯ್ಕ,ಹೊಲನಗದ್ದೆ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ ಮತ್ತಿತರರು ಉಪಸ್ಥಿತರಿದ್ದರು.