ಭಟ್ಕಳ- ಜಿಲ್ಲೆಯ ಶಕ್ತಿ ಕ್ಷೇತ್ರವೆಂದೆ ಕರೆಯಲ್ಪಡುವ ಶ್ರೀ ಕ್ಷೇತ್ರ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹದಿನೈದು ದಿನಗಳ ವರೆಗೂ ವಿಶೇಷವಾಗಿ ನಡೆಯುವ ನವರಾತ್ರಿ ಉತ್ಸವದಲ್ಲಿ ಇಂದು ಗುರುವಾರ ನಿನಾದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿಯವರ ನಿನಾದ ಸಾಹಿತ್ಯ ಸಂಗೀತ ಸಂಚಯದವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಅತ್ಯಂತ ಯಶಸ್ಸಿನೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

RELATED ARTICLES  ನಮಗೆ ಎಲ್ಲವನ್ನೂ ನೀಡಿದ ಸಮಾಜಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸುವ ಮನೋಭಾವನೆ ಇರಬೇಕು :ನಾಗರಾಜ ನಾಯಕ ತೊರ್ಕೆ


ಉಮೇಶ ಮುಂಡಳ್ಳಿ ವಿಶೇಷವಾಗಿ ಭಕ್ತಿಗೀತೆ, ಭಾವಗೀತೆ, ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿ ಕಾರ್ಯಕ್ರಮಕ್ಕೆ ವಿಶೇಷತೆ ತಂದುಕೊಟ್ಟರು.ಎಚ್ ಎಸ್ ವಿ ಯವರ ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ, ವಿಸಿಯವರ ಗೀತವೆನ್ನ ಜೀವನ, ಹಿಮಗಿರಿಯ ಸೃಂಗ, ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ಎಂಬ ದೇಶಭಕ್ತಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮುಂಡಳ್ಳಿಯವರ ಮಗಳು ಆರು ವರ್ಷದ ನಿನಾದ ಗುರುದೇವ ಜಯದೇವ ಭಜನ್ ಹಾಡಿದಳು.

RELATED ARTICLES  ಅಂದರ್ - ಬಾಹರ್ ಆಡುತ್ತಿದ್ದ ಆರೋಪಿತರು ಅರೆಸ್ಟ್..!


ಕೀಬೋರ್ಡ್ ನಲ್ಲಿ ನವೀನ್ ಶೇಟ್ ಹೊನ್ನಾವರ ಹಾಗೂ ತಬಲದಲ್ಲಿ ಹರೀಶ್ ಧಾರೇಶ್ವರ ಸಾಥ್ ನೀಡಿದರು.


ಇದೇ ವೇಳೆ ಗಾಯಕ ಸಾಹಿತಿ ಉಮೇಶ ಮುಂಡಳ್ಳಿ ದಂಪತಿಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಧರ್ಮದರ್ಶಿ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.