ಶಿರಸಿ : ವೈವಿಧ್ಯತೆ ಮತ್ತು ನಾವೀನ್ಯತೆಯನ್ನು ತನ್ನ ಪ್ರತಿ ಗ್ರಾಹಕ ಸ್ನೇಹಿ ಚಟುವಟಿಕೆಯಲ್ಲಿ ವ್ಯಕ್ತಪಡಿಸುತ್ತಿರುವ ಟಿ.ಎಸ್.ಎಸ್. ಇದೇ ಅಕ್ಟೋಬರ್ 11 ಮತ್ತು 12 ರಂದು ಆಟೋ & ಅಪ್ಲೈಯನ್ಸ್ ಎಕ್ಸ್‍ಪೋ-2019 ಮತ್ತು ಫುಡ್ ಎಕ್ಸ್‍ಪ್ರೆಸ್‍ನ್ನು ಆಯೋಜಿಸಿದೆ. ಶಿರಸಿ ಟಿ.ಎಸ್.ಎಸ್. ಆವಾರದಲ್ಲಿ ನಡೆಯಲಿರುವ ಆಟೋ ಎಕ್ಸ್‍ಪೋದಲ್ಲಿ ದ್ವಿಚಕ್ರ ವಾಹನಗಳ ಪ್ರಸಿದ್ಧ ಕಂಪನಿಗಳಾದ ಯಮಹಾ, ಟಿ.ವಿ.ಎಸ್., ಹೊಂಡಾ, ರಾಯಲ್ ಎನ್‍ಫೀಲ್ಡ್ ಮತ್ತು ಸುಝುಕಿ ಕಂಪನಿಗಳ ಪ್ರತಿನಿಧಿಗಳು ಹಾಗೂ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಝುಕಿ, ಹುಂಡೈ, ನೆಕ್ಸಾ, ಟಾಟಾ ಮೋಟಾರ್ಸ್, ಟೊಯೋಟಾ, ರೆನಾಲ್ಟ್ ಮತ್ತು ಕಿಯಾ ಇವರು ವಾಹನಗಳೊಂದಿಗೆ ಭಾಗವಹಿಸಲಿದ್ದಾರೆ. ಒಂದೇ ಸೂರಿನಡಿಯಲ್ಲಿ ಗ್ರಾಹಕರು ಖರೀದಿಸ ಬಯಸುವ ವಾಹನಗಳ ತುಲನಾತ್ಮಕ ವಿಮರ್ಶೆ ಇದರಿಂದ ದೊರೆಯಲ್ಲಿದ್ದು, ಖರೀದಿಗೆ ಅನುಕೂಲಕರವಾಗಲಿದೆ. ಕಂಪನಿ ಮತ್ತು ಡೀಲರ್‍ಗಳಿಂದ ವಿಶೇಷ ರಿಯಾಯತಿ ಇರಲಿದ್ದು, ಟಿ.ಎಸ್.ಎಸ್. ಆ ದಿನಗಳಲ್ಲಿ ಖರೀದಿಸಿದ ಗ್ರಾಹಕರಿಗೆ ಖಚಿತ ಉಡುಗೊರೆ ಮತ್ತು ಲಕ್ಕಿ ಡ್ರಾ ಯೋಜನೆಯನ್ನು ರೂಪಿಸಿದೆ.
ಹೋಂ ಅಪ್ಲೈಯನ್ಸ್ ಎಕ್ಸ್‍ಪೋದಲ್ಲಿ ವಿವಿಧ ಕಂಪನಿಯ ಟಿ.ವಿ., ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಎಲ್ಲಾ ಗೃಹಪಯೋಗಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇವುಗಳ ಖರೀದಿಯ ಮೇಲೆ ಗ್ರಾಹಕರು ಬಾರಿ ರಿಯಾಯಿತಿ ಪಡೆಯಬಹುದಾಗಿದೆ.
ಇದರ ಜೊತೆಗೆ ವಿವಿಧ ತಿನಸುಗಳ ಸಂಭ್ರಮ “ಫುಡ್ ಎಕ್ಸ್‍ಪ್ರೆಸ್” ಸಹ ಆಯೋಜನೆ ಆಗಿದ್ದು, ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶೈಲಿಯ ತಿನಿಸುಗಳು ಅಂದು ಲಭ್ಯವಿದೆ. ನುರಿತ ಬಾಣಸಿಗರಿಂದ ತಯಾರಿಸಲಾಗುವ ವಿಶೇಷ ತಿನಿಸುಗಳು ಗ್ರಾಹಕರ ಮನತಣಿಸಲಿವೆ.
ಆಟೋ & ಅಪ್ಲೈಯನ್ಸ್ ಎಕ್ಸ್‍ಪೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಟಿ.ಎಸ್.ಎಸ್. ಆವಾರದಲ್ಲಿ ಅಕ್ಟೋಬರ್ 11 ಶುಕ್ರವಾರ ಬೆಳಿಗ್ಗೆ 10.30 ಘಂಟೆಗೆ ಜರುಗಲಿದ್ದು, ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಈಶ್ವರ ಉಳ್ಳಾಗಡ್ಡಿ ಹಾಗೂ ಶಿರಸಿ ಉಪವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ ವಾಸಿಂ ಬಾವಾ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಅಂತೆಯೇ ಅಕ್ಟೋಬರ್ 12 ಶನಿವಾರ ಸಂಜೆ 6.00 ಘಂಟೆಗೆ ಸಮಾರೋಪ ಸಮಾರಂಭವು ನೇರವೇರಲಿದ್ದು ಶಿರಸಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಎಸ್.ಜಿ. ಹೆಗಡೆ ಇವರು ಭಾಗವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಟಿ.ಎಸ್.ಎಸ್. ನ ಅಧ್ಯಕ್ಷರಾದ ಶ್ರೀ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇವರು ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಎಕ್ಸ್‍ಪೋದ ಪ್ರಯೋಜನವನ್ನು ಪಡೆಯಬೇಕೆಂದು ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.