ಅಂಕೋಲಾ : ತನ್ನ ಸಮಾಜಮುಖಿ ಕೆಲಸಗಳಿಂದ ಹೆಸರಾಗಿರುವ ಅಂಕೋಲಾ ಲಯನ್ಸ ಕ್ಲಬ್ ಕರಾವಳಿ ತನ್ನ ಶೈಕ್ಷಣಿಕ ಪ್ರೋತ್ಸಾಹದ ಅಭಿಯಾನದ ಅಡಿಯಲ್ಲಿ ಅಂಕೋಲೆಯ ಅಜ್ಜಿಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಲಿಂಗ್ ಪ್ಯಾನ್‍ಗಳನ್ನು ಕೊಡುಗೆಯಾಗಿನೀಡಿದೆ. ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಈ ಕೊಡುಗೆಯ ಪ್ರಾಯೋಜಕರಾದ ಲಯನ್ ಶಂಕರ ಹುಲುಸ್ವಾರ ಮುಖ್ಯಾಧ್ಯಾಪಕರಿಗೆ ಫ್ಯಾನ್‍ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ದೇವರು ಕೊಟ್ಟದ್ದರಲ್ಲಿ ಹಂಚಿ ತಿನ್ನುವದರಲ್ಲಿ ಬಹುದೊಡ್ಡ ಸಂತೃಪ್ತಿಯಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ದಂತ ತಪಾಸಣೆಯನ್ನು ಡೆಂಟಲ್ ಕ್ಲಿನಿಕನ ಡಾ. ಕರುಣಾಕರ ನಾಯ್ಕ ನಡೆಸಿಕೊಟ್ಟರು. ದೇಹದ ಆರೋಗ್ಯ ಕಾಪಾಡುವಲ್ಲಿ ಹಲ್ಲುಗಳ ಆರೋಗ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹಲ್ಲು ರಕ್ಷಣೆಯ ಪತ್ರಿಕೆಯೊಂದಿಗೆ ಉಚಿತ ಟುತ್ ಬ್ರೇಷ ಮತ್ತು ಪೇಸ್ಟನ್ನು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ ಅಧ್ಯಕ್ಷ ಮಹಾಂತೇಶ ರೇವಡಿ ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು ಒಳ್ಳೇಯ ನಡತೆ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಲಾ. ಗಣಪತಿ ನಾಯಕ, ಖಜಾಂಚಿ ಸಂತೋಷ ಸಾಮಂತ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.