ಶ್ರೀ  ಅಖಿಲ ಹವ್ಯಕ ಮಹಾಸಭೆಯ ಹಿತೈಷಿಗಳಾದ ಡಾ. ಸಿ ಎನ್ ಡಾ. ಅಶ್ವಥ್’ನಾರಾಯಣ್ ಅವರು ಘನ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ಡಾ. ಸಿ.ಎನ್. ಅಶ್ವಥ್’ನಾರಾಯಣ್ ಅಭಿಮಾನಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, 13.10.2019 ಭಾನುವಾರ ಸಂಜೆ 6.30 ಕ್ಕೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

RELATED ARTICLES  SSLC ಯಲ್ಲಿ ಶಾಲೆಗೆ ಹೊಸ ದಾಖಲೆ ನಿರ್ಮಿಸಿದ ಸಾಧಕ ವಿಧ್ಯಾರ್ಥಿಗಳಿಬ್ಬರಿಗೆ ಅವರ ಮನೆಯಂಗಳದಲ್ಲಿಯೇ  ಸನ್ಮಾನ


ಡಿಸಿಎಮ್ ಡಾ. ಅಶ್ವಥ್’ನಾರಾಯಣ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದು, ಹವ್ಯಕ ಮಹಾಸಭೆ ಹಾಗೂ ಅಭಿಮಾನಿ ಬಳಗದ ಸನ್ಮಾನವನ್ನು ಸ್ವೀಕರಿಸಲಿದ್ದಾರೆ. ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ವಹಿಸಲಿದ್ದು;  ಕಾಡುಮಲ್ಲೇಶ್ವರ ವಾರ್ಡ್ ಬಿಬಿಎಂಪಿ ಸದಸ್ಯರಾದ ಶ್ರೀ ಮಂಜುನಾಥ್ ರಾಜು ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

RELATED ARTICLES  ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪರವಾನಿಗೆ ಹೊಂದಿರುವ ಬಂದೂಕು ಹಾಗೂ ಪರವಾನಿಗೆ ರಹಿತ ಬಂದೂಕುಗಳ ಮಾಹಿತಿ ಪರಿಶೀಲನೆ.