ಹೊನ್ಸಾವರ : ಸಾಹಿತಿ ಸಂದೀಪ.ಎಸ್.ಭಟ್ಟರ ಮನೆಯಂಗಳ ಗಾನ- ದಾನ-ಯಾನ ಎಂಬ ಅಭೂತಪೂರ್ವ ಹೃದಯಸ್ಪರ್ಷಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

 

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಡಾ|| ಜಿ.ಎಲ್.ಹೆಗಡೆ. , ಡಾ|| ಶ್ರೀಪಾದ ಶೆಟ್ಟಿ , ಶ್ರೀ ಜಿ ಯು ಭಟ್ಟ , ಶ್ರೀ ಶಿವರಾಮ ಗಾಂವಕರ, ಶ್ರೀ ಕೃಷ್ಣಮೂರ್ತಿ ಹೆಬ್ಬಾರ, ಶ್ರೀಮತಿ ಶ್ರೀಕಲಾ ಶಾಸ್ತ್ರಿ, ಮಾಜಿ ಶಾಸಕರಾದ ಶ್ರೀ ದಿನಕರ ಕೆ ಶೆಟ್ಟಿ, ಡಾ|| ಜಿ.ಜಿ. ಹೆಗಡೆ, ಶ್ರೀ ಚಿದಾನಂದ ಭಂಡಾರಿ, ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಭಾಷಣವೆಂದರೆ ಅಲರ್ಜಿ ಎನ್ನುವ ಕಾಲದಲ್ಲೂ ಮಾತಿನ ಮಳೆಯಲ್ಲಿ ಮಿಂದೆದ್ದು ಸಂತಸಪಡುವಂತಾದ್ದು ಕಾರ್ಯಕ್ರಮದ ವಿಶೇಷ. ಈ ಸಂದರ್ಭದಲ್ಲಿ ಶ್ರೀ ಸಂದೀಪ. ಎಸ್. ಭಟ್ಟರ 14 ನೇ ಕೃತಿ “ನಾನು English ಕಲಿಯಬೇಕು ಸರ್ “ಅನಾವರಣಗೊಂಡಿತು.

RELATED ARTICLES  ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

 
ಈ ಸಂದರ್ಭದಲ್ಲಿ ಪ್ರಖ್ಯಾತ ಸಂಗೀತಗಾರರು 16 ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಬರುವುದೆಲ್ಲ ಬರಲಿ ಬಿಡು, ಯಾಕೋ ಕಾಣೆ ರುದ್ರವೀಣೆ, ಯಾರೇನಗಲಿ ತೇಲಿ ಬರಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಲೋಕದ ಕಣ್ಣಿಗೆ ರಾಧೆಯು ಕೂಡ, ಹೀಗೆ ಮರೆಯಲಾಗದ ಹಾಡುಗಳನ್ನು ಎದೆ ತುಂಬಿ ಹಾಡಿದವರು ಶ್ರೀ ಗಣಪತಿ ಹೆಗಡೆ ಯಲ್ಲಾಪುರ, ಕುಮಾರಿ ಸಂಗೀತಶಾಸ್ತ್ರ ನಾಯ್ಕ ಹೊನ್ನಾವರ, ಕುಮಾರಿ ಸಹನಾ ಭಟ್ಕಳ ಮತ್ತು ಶ್ರೀ ರಮೇಶ ಹೆಗಡೆ ಕುಮಟಾ. ಇವರಿಗೆ ತಬಲಾದಲ್ಲಿ ಶ್ರೀ ಎನ್.ಜಿ.ಹೆಗಡೆ ಕಪ್ಪೆಕೇರಿ, ಗಿಟಾರದಲ್ಲಿ ಶ್ರೀ ಶಿವರಾಮ ಭಾಗವತ, ಹಾಗೆಯೇ ಹಾರ್ಮೋನಿಯಂದಲ್ಲಿ ಶ್ರೀ ಸತೀಶ ಹೆಗ್ಗಾರ ರವರು ಸಾಥ ನೀಡಿದರು.

RELATED ARTICLES  ಶಾಲೆ ಎನ್ನುವದು ಆನಂದಧಾಮ ರಾಘವೇಶ್ವರ ಶ್ರೀ