ಕಾರವಾರ: ಮತ್ಸ್ಯಗಂಧ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಮೂಲದ ಮಹಿಳೆಯೊಬ್ಬರ ಬ್ಯಾಗ್ನಿಂದ ಸುಮಾರು 9 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳನ್ನು ಕಳ್ಳರು ದೋಚಿದ್ದಾರೆ.

ಮತ್ಸ್ಯಗಂಧ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಶಮೀಳಾ ಶೆಟ್ಟಿ ಅವರ ಬ್ಯಾಗ್ನಲ್ಲಿದ್ದ ವಜ್ರದ ಒಡವೆಗಳು ಕಳ್ಳತನವಾಗಿವೆ. ವಜ್ರದ ಮೂಗುತಿ ಸೆಟ್, 2 ನವರತ್ನ ಚೈನುಗಳು, ವಜ್ರದ ಪೆಂಡೆಂಟ್, ವಜ್ರದ ಮೂಗುತಿ ರಿಂಗ್, ಗಡಿಯಾರ, 2 ಮೊಬೈಲ್ ಸೇರಿ 9 ಲಕ್ಷ ರೂ ವಸ್ತುಗಳು ಹಾಗೂ 5 ಸಾವಿರ ರೂ. ನಗದು ಇವುಗಳನ್ನು ಕಳುವು ಮಾಡಲಾಗಿದೆ.

RELATED ARTICLES  ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಡಾ.ಎ.ವಿ.ಬಾಳಿಗಾ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ರೈಲು ಮಡಗಾಂವದಿಂದ ಗೋಕರ್ಣ ಮಾರ್ಗ ಮಧ್ಯದಲ್ಲಿ ಸಂಚರಿಸುವ ವೇಳೆ ಈ ಕಳ್ಳತನ ನಡೆದಿದ್ದು ಪಕ್ಕದ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯೇ ಕದ್ದಿರಬಹುದು ಎಂದು ಆರೋಪಿಸಿ ಮಹಿಳೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ

RELATED ARTICLES  ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ..!