ಭಟ್ಕಳ: ತಾಲೂಕಿನ ನೇತ್ರಾಣಿ ಗುಡ್ಡದ ಸಮೀಪ ಬೋಟೋಂದಕ್ಕೆ ನೀರು ನುಗ್ಗಿ ಅಪಾಯದಲ್ಲಿರುವುದನ್ನು ಅರಿತು ತಕ್ಷಣ ಇನ್ನೋಂದು ಬೋಟಿನವರು ಮೀನುಗಾರರನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಶ್ರೀ ಮೂಕಾಂಬಿಕಾ ಎನ್ನುವ ಬೋಟು ಮೀನುಗಾರಿಕೆಯನ್ನು ಮಾಡುತ್ತಿರುವಾಗ ನೇತ್ರಾಣಿಯ ಸಮೀಪ ಮೀನುಗಾರಿಕೆ ಮಾಡುತ್ತಿರುವಾಗ ಬೋಟಿನ ಒಳಗಡೆಯಲ್ಲಿ ನೀರು ಬರಲಾರಂಭಿಸಿದ್ದನ್ನು ಗಮನಿಸಿದ ಮೀನುಗಾರರು ಹತ್ತಿರದಲ್ಲಿಯೇ ಮೀನುಗಾರಿಕೆ ಮಾಡುತ್ತಿರುವ ಇತರ ಬೋಟುಗಳಿಗೆ ತಿಳಿಸಿದ್ದು ತಕ್ಷಣ ಇವರಲ್ಲಿಗೆ ಬಂದ ಬೋಟುಗಳು ಇವರನ್ನು ರಕ್ಷಿಸಿದೆ. ಬೋಟಿನಲ್ಲಿ ಒಟ್ಟು 28 ಮೀನುಗಾರರಿದ್ದು ಬೇರೆ ಬೇರೆ ಮೀನುಗಾರಿಕಾ ಬೋಟುಗಳಲ್ಲಿ ಭಟ್ಕಳ ಬಂದರಕ್ಕೆ ಬಂದಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. (ಶಿತಾಲಿ ನವದುರ್ಗ) ಶ್ರೀ ಮೂಕಾಂಬಿಕಾ ಮೀನುಗಾರಿಕಾ ಬೋಟು ಕೂಡಾ ಭಟ್ಕಳ ಬಂದರಕ್ಕೆ ಬಂದು ತಲುಪಿರುವ ಕುರಿತೂ ವರದಿಯಾಗಿದೆ. ಬೋಟು ಗಂಗೊಳ್ಳಿಯ ಮಧುಕರ ಪೂಜಾರಿ ಎನ್ನುವವರಿಗೆ ಸೇರಿದ್ದೆನ್ನಲಾಗಿದ್ದು ಭಟ್ಕಳದಿಂದ ಮೀನುಗಾರಿಕೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಂದರಕ್ಕೆ ಹೋಗಿದ್ದು ಮಾಹಿತಿಯ್ನನು ಪಡೆದುಕೊಂಡು ಬೋಟು ಹಾಗೂ ಕಲಾಸಿಗಳ ರಕ್ಷಣೆಯ ಕುರಿತು ಕ್ರಮ ಕೈಗೊಂಡಿದ್ದಾರೆ.