ಮೀಟರ್ ಬಡ್ಡಿ ಕಿರುಕುಳದ ಆರೋಪ ಮಾಡಿ ಶರಾವತಿ ನದಿಗೆ ಹಾರಿ ಕಣ್ಮರೆಯಾಗಿದ್ದ ನೇತ್ರಾ ಅಂಬಿಗ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಹೊನ್ನಾವರದಲ್ಲಿ ಶವ ಪತ್ತೆಯಾಗಿದ್ದು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಕಿರುಕುಳ ನೀಡಿದ ಆರೋಪಿ ವಿಮಲ್ ನಾಯ್ಕ ಬಂಧಿಸಲು ಮ್ರತ ನೇತ್ರಾ ಸಂಬಂಧಿಕರು,ಸ್ಥಳಿಯರಿಂದ ಪ್ರತಿಭಟನೆ ನಡೆಸಿದ್ದಾರೆ.
ಅಂಬುಲೆನ್ಸನಲ್ಲಿಯೇ ಶವ ಇಟ್ಟುಹೊನ್ನಾವರ ತಾಲೂಕಾ ಆಸ್ಪತ್ರೆ ಎದುರು ಧರಣಿ ನಡೆಸಿದ್ದಾರೆ.
500ಕ್ಕು ಅಧಿಕ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗಿ ವರದಿಯಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಎಎಸ್ಪಿ ನಿಖಿಲ್ ಬುಳ್ಳಾವರ್ ಭೇಟಿ ನೀಡಿದ್ದಾರೆ.ಪ್ರತಿಭಟನಾ ನಿರತರೊಂದಿಗೆ ಚರ್ಚೆ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದರು ಎನ್ನಲಾಗಿದೆ.