ಕಾರವಾರ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾಧಿಕಾರಿ ಕೆ.ಹರೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಇಂದಿನ ದಿನದಲ್ಲಿ ಆದರ್ಶದ ವ್ಯಾಖ್ಯಾನ ಬದಲಾಗಿದೆ. ಜೊತೆಗೆ ಎಲ್ಲವನ್ನೂ ಟೀಕಿಸುವುದು ಹಾಗೂ ಅರ್ಥಮಾಡಿಕೊಳ್ಳದೇ ಟೀಕಿಸುವವರ ಸಂಖ್ಯೆ ಹೆಚ್ಚದೆ.


ವೈಚಾರಿಕ ಹಿನ್ನೆಲೆ ಟೀಕೆ ಟಿಪ್ಪಣಿಗಳನ್ನು ಜ್ನಾನವಿಲ್ಲದೇ ಮಾಡಬಾರದು. ಸತ್ಯ ಶೋಧನೆಯ ಕೆಲಸ ಯುವಜನಾಂಗದಿಂದಾಗಬೇಕು. ಈಗಿನವರಿಗೆ ಜಗತ್ತನ್ನು ನೊಡುವ ದ್ರಷ್ಟಿಗೆ ಪೂರಕವಾದ ಅಂಶಗಳು ಬಹುಬೇಗ ಸಿಗುತ್ತವೆ’ ಎಂದರು.

RELATED ARTICLES  ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ.


ಸರ್ಕಾರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಗೀತಾ ತಳವಾರ ಮಹರ್ಷಿ ವಾಲ್ಮೀಕಿಯ ಕುರಿತು ಉಪನ್ಯಾಸ ನೀಡಿದರು.
ಉಪಸ್ಥಿತರಿದ್ದ ಹಿಮಂತರಾಜು ಮಾತನಾಡಿ, ‘ರಾಮಾಯಣವು ಮನುಷ್ಯನ ಬದುಕಿನ ಬದಲಾವಣೆಯ ಮಹಾಕಾವ್ಯವಾಗಿದ್ದು ನಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು’ ಎಂದರು.

RELATED ARTICLES  ಮಹಾಬಲೇಶ್ವರ ದೇವಾಲಯಕ್ಕೆ ಭಾರತೀಯ ಚುನಾವಣಾ ಆಯುಕ್ತರ ಭೇಟಿ


ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಿರಿಶಿಷ್ಟ ಪಂಗಡದ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕೆ. ಹರೀಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮ ವಾಲ್ಮೀಕಿ, ನಾಗರಾಜ ತಳವಾರ, ಪುರುಷೋತ್ತಮ ಇದ್ದರು.