ಶಿರಸಿ: ವಿಷ ಪ್ರಾಶನದಿಂದ 2 ಗಂಡು ಮತ್ತು 9 ಹೆಣ್ಣು ಸೇರಿ ಒಟ್ಟೂ 12 ಕುರಿಗಳು ದಾರುಣ ಸಾವು ಕಂಡು ಘಟನೆ ತಾಲೂಕಿನ ಇಸಳೂರಿನ ವಿದ್ಯಾನಗರದಲ್ಲಿ ನಡೆದಿದೆ. ಕುರಿಗಳ ಸಾವಿನಿಂದ ಸುಮಾರು 1.5 ಲಕ್ಷಕ್ಕೂ ಅಧಿಕ ನಷ್ಟ ಎಂದು ಅಂದಾಜಿಸಲಾಗಿದೆ.

ಇಸಳೂರಿನ ಓಂಕಾರಪ್ಪ ಕೊರಚರ ಅವರಿಗೆ ಸೇರಿದ 6 ಕುರಿ ಹಾಗೂ 6 ಮೇಕೆ ಮೃತಪಟ್ಟಿವೆ. ಹೆಣ್ಣು ಕುರಿಗಳು ಮರಿ ಹಾಕುವ ಹಂತದಲ್ಲಿದ್ದ ಕಾರಣ ಹೊಟ್ಟೆಯಲ್ಲಿಯೇ ಮರಿಗಳೂ ಸಹ ಮೃತಪಟ್ಟಿವೆ. ಇವುಗಳ ಸಾವು ಅನುಮಾನಾಸ್ಪದವಾಗಿದ್ದರೂ, ಮೇಲ್ನೋಟಕ್ಕೆ ವಿಷ ಪ್ರಹಸನದಿಂದ ಎಂದು ಮಾಲೀಕರು ತಿಳಿಸಿದ್ದಾರೆ.

RELATED ARTICLES  ಗೋಕರ್ಣದಲ್ಲಿ ‘ಕದಿರು ಹರಣೋತ್ಸವ’ ಸಂಪನ್ನ

ತೋಟದಲ್ಲಿ ಮೇಯಲು ಹೋದಾಗ 5 ಹಾಗೂ ಮನೆಯಲ್ಲಿ 7 ಕುರಿಗಳು ಸಾವು ಕಂಡಿವೆ. ಕುರಿಗಳ ಸಾಕಾಣಿಕೆ ಮಾಡುವ ಕೊರಚರ ಮನೆಯಲ್ಲಿ ಒಟ್ಟೂ 45 ಕುರಿಗಳಿದ್ದು, ಅವುಗಳಿಂದಲೇ ಜೀವನ ಸಾಗಿಸಬೇಕಾಗಿದೆ. 12 ಕುರಿಗಳ ಸಾವು ಬಹುದೊಡ್ಡ ನಷ್ಟವನ್ನು ಉಂಟು ಮಾಡಿದ್ದು, ಸರ್ಕಾರ ಸಹಾಯ ಹಸ್ತವನ್ನು ಚಾಚಿದ್ದಾರೆ.

RELATED ARTICLES  ಕಾರವಾರ ಬೋಟ್ ಮುಳುಗಡೆ ಅವಘಡ:ನಡೆಯುತ್ತಲೇ ಇದೆ ನಾಪತ್ತೆಯಾದವರ ಹುಡುಕಾಟ..!!

ಕುರಿಗಳ ಸಾವು ಕಾಣುತ್ತಿದ್ದಂತೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ಗಣೇಶ್ ಮತ್ತಿತ್ತರರು ಭೇಟಿ ನೀಡಿ ಸ್ಯಾಂಪಲ್ ಪಡೆದುಕೊಂಡಿದ್ದಾರೆ.