ಕಾರವಾರ: ವಿದ್ಯುತ್ ಬಿಲ್ ಒಂದು ಇಲ್ಲವೇ ಎರಡು ತಿಂಗಳೊಳಗೆ ಕೈ ಸೇರುವುದು ಸಾಮಾನ್ಯ. ಹೀಗೆ ಸೇರಿದ ಬಿಲ್ ತಿಂಗಳೊಳಗೆ ಪಾವತಿಸದೇ ಇದ್ದಲ್ಲಿ ವಿದ್ಯುತ್ ಸಂಪರ್ಕವನ್ನೆ ಕಡಿತಗೊಳಿಸಲಾಗುತ್ತದೆ. ಆದರೆ ಇಲ್ಲೊಂದು ಮನೆಗೆ ತಿಂಗಳಿಗೆ ಬರುವ ಬಿಲ್ ಜತೆ ಎರಡು ವರ್ಷದ ಹಿಂದಿನ ಬಿಲ್ ಎಂದು ಬರೊಬ್ಬರಿ ೧೦ ಸಾವಿರ ನೀಡಿದ್ದು, ಬಿಲ್ ನೋಡಿದ ಮನೆಯವರು ಕಂಗಾಲಾಗಿದ್ದಾರೆ. ಹೌದು, ಇಂತಹದೊಂದು ಘಟನೆ ನಡೆದಿರುವುದು ಕುಮಟಾ ತಾಲ್ಲೂಕಿನ ಹೊಸ ಹೆರವಟ್ಟಾದ ನಾರಾಯಣ ದೇವು ಗೌಡ ಎಂಬುವವರ ಮನೆಯಲ್ಲಿ.

ಸಾಮಾನ್ಯವಾಗಿ ೪೦೦ ರಿಂದ ೫೦೦ ರೂಪಾಯಿ ರವರೆಗೆ ಬರುತ್ತಿದ್ದ ಬಿಲ್ ಸೆಪ್ಟೆಂಬರ್ ತಿಂಗಳಿನಲ್ಲಿ ೯,೯೬೪ ರೂಪಾಯಿ ಬಂದಿದ್ದು, ಬಿಲ್ ಕಂಡು ಮನೆಯವರೆಲ್ಲ ಹೌಹಾರಿದ್ದಾರೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೇ ೨೦೧೫-೧೭ರವರೆಗಿನ ಆಡಿಟ್ ಇದೀಗ ಮಾಡಿದ್ದು ವ್ಯತ್ಯಾಸ ಬಂದಿರುವುದಾಗಿ ತಿಳಿಸುತ್ತಿದ್ದಾರೆ. ಆದರೆ ಎರಡು ವರ್ಷದ ಹಿಂದೆ ಮೀಟರ್ ರಿಡಿಂಗ್ ಹೆಚ್ಚಾಗುತ್ತಿರುವ ಬಗ್ಗೆ ಎರಡು ಭಾರಿ ದೂರು ನೀಡದರೂ ಸರಿಪಡಿಸಲು ಹಲವು ತಿಂಗಳು ತೆಗೆದುಕೊಂಡಿದ್ದ ಅಧಿಕಾರಿಗಳು ಬಳಿಕ ಹೆಚ್ಚುವರಿ ಹಣ ತುಂಬಿಸಿಕೊಂಡಿದ್ದರು. ಆದರೆ ಇದೀಗ ಎರಡು ವರ್ಷದ ಬಿಲ್ ಎಂದು ಯಾವುದೇ ನೋಟಿಸ್ ಕೂಡ ನೀಡದೆ ತಿಂಗ ಬಿಲ್ ಸೇರಿಸಿ ೧೦ ಸಾವಿರ ನೀಡಿದ್ದು ಮನೆಯವರು ಶಾಕ್ ಆಗಿದ್ದಾರೆ. ಯಾರೋ ಮಾಡಿದ ತಪ್ಪಿನ ಹಣವನ್ನು ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಕೂಲಿನಾಲಿ ಮಾಡಿ ಜೀವನ ಮಾಡುವ ನಮಗೆ ಎಲ್ಲಿಂದ ಇಷ್ಟೊಂದು ಹಣ ತಂದು ಕಟ್ಟಬೇಕು. ಆದರೆ ಇದು ಸಾಧ್ಯವಿಲ್ಲದ ಕಾರಣ ಕೂಡಲೇ ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಿ ತಿಂಗಳಿಗೆ ಏನು ಬಿಲ್ ಬರುತ್ತದೆಯೋ ಅಷ್ಟನ್ನು ಮಾತ್ರ ಕಟ್ಟಿಸಿಕೊಳ್ಳಬೇಕು ಎಂದು ಮನೆಯವರು ಮನವಿ ಮಾಡಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಸ್ವಂತ ಉದ್ಯೋಗ ಹುಡುಕುವವರಿಗೆ ಶುಭ ಸುದ್ದಿ.