ಹೊನ್ನಾವರ: ತಾಲೂಕಿನ ಕಾಸರಕೋಡ ಪಂಚಾಯತ್ ವ್ಯಾಪ್ತಿಯ ಕಳಸನಮೋಟೆಯ ಶ್ರೀಮತಿ ನೇತ್ರಾವತಿ ಅಂಬಿಗ (ಅಂಗನವಾಡಿ ಶಿಕ್ಷಕಿ) ಮೀ.ಬಡ್ಡಿ ಕಿರುಕುಳಕ್ಕೆ ಬಲಿಯಾದ ದುರ್ಘಟನೆ ಸಂಭವಿಸಿತ್ತು.

ಮೀ. ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಡ ಅಂಗನವಾಡಿ ಶಿಕ್ಷಕಿಯಾದ ನೇತ್ರಾವತಿ ಅಂಬಿಗ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಅವರ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಹೊನ್ನಾವರ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದವರು ಇಂದು ಪ್ರತಿಭಟನೆ ನಡೆಸಿದ್ದರು.

RELATED ARTICLES  ಪೋಷಕಾಂಶಗಳ ಅರಿವು ಮೂಡಿಸಿದ ಪೋಷಣಾ ಅಭಿಯಾನ

ಪ್ರತಿಭಟನೆಯಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ಮನವಿಯನ್ನು ಸ್ವೀಕರಿಸಿದ ಶಾಸಕ ಸುನಿಲ್ ನಾಯ್ಕ, ಘಟನೆಯ ಬಗ್ಗೆ ಈಗಾಗಲೇ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರೊಂದಿಗೆ ಚರ್ಚಿಸಿದ್ದು, ಘಟನೆಗೆ ಸಂಭಂದಿಸಿದ ಒಬ್ಬ ಆರೋಪಿಯನ್ನು ಬಂದಿಸಲಾಗಿದೆ. ಪೋಲಿಸ್ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮುಖ್ಯ ಆರೋಪಿಗೆ ಜಾಮೀನು ಸಿಗದಂತೆ ಬಂದಿಸಲು ಬೇಕಾಗಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಲಾಗುವುದು ಹಾಗೂ ಕುಟುಂಬಕ್ಕೆ ವಯಕ್ತಿಕ ಸಹಾಯವನ್ನು ಮಾಡಲಾಗುವುದು ಎಂಬ ಮಾಹಿತಿಯನ್ನು ನೆರೆದಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.

RELATED ARTICLES  ಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದವ ಅರೆಸ್ಟ್.