ಹೊನ್ನಾವರ : ತಾಲೂಕಿನ ಕಾಸರಕೋಡ ಪಂಚಾಯತ್ ವ್ಯಾಪ್ತಿಯ ಕಳಸನಮೋಟೆಯ ಶ್ರೀಮತಿ ನೇತ್ರಾವತಿ ಅಂಬಿಗ (ಅಂಗನವಾಡಿ ಶಿಕ್ಷಕಿ) ಮೀ.ಬಡ್ಡಿ ಕಿರುಕುಳಕ್ಕೆ ಬಲಿಯಾದ ದುರ್ಘಟನೆ ಸಂಭವಿಸಿತ್ತು.

ಮೀ. ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಡ ಅಂಗನವಾಡಿ ಶಿಕ್ಷಕಿಯಾದ ನೇತ್ರಾವತಿ ಅಂಬಿಗ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಅವರ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಹೊನ್ನಾವರ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದವರು ಇಂದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿಯನ್ನು ಸ್ವೀಕರಿಸಿ, ಘಟನೆಯ ಬಗ್ಗೆ ಈಗಾಗಲೇ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರೊಂದಿಗೆ ಚರ್ಚಿಸಿದ್ದು, ಘಟನೆಗೆ ಸಂಭಂದಿಸಿದ ಒಬ್ಬ ಆರೋಪಿಯನ್ನು ಬಂದಿಸಲಾಗಿದೆ. ಪೋಲಿಸ್ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮುಖ್ಯ ಆರೋಪಿಗೆ ಜಾಮೀನು ಸಿಗದಂತೆ ಬಂದಿಸಲು ಬೇಕಾಗಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಲಾಗುವುದು ಹಾಗೂ ಕುಟುಂಬಕ್ಕೆ ವಯಕ್ತಿಕ ಸಹಾಯವನ್ನು ಮಾಡಲಾಗುವುದು ಎಂಬ ಮಾಹಿತಿಯನ್ನು ನೆರೆದಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಯಿತು.

RELATED ARTICLES  ದೀವಗಿಯಲ್ಲಿ ಗಮನ ಸೆಳೆದ ಕಲಿಕಾ ಹಬ್ಬ.

ತಾಲೂಕಿನಲ್ಲಿ ತಲ್ಲನಗೊಳಿಸಿದ್ದ ಪ್ರಕರಣದ ಆರೋಪಿಗಳ ಬಂದನವಾಗಿರುವುದು ಅಂಗನವಾಡಿ ಹೊರಾಟಗಾರರ ಒಂದು ಬೇಡಿಕೆ ಈಡೇರಿದಂತಾಗಿದೆ. ೨ ಆರೋಪಿಗಳನ್ನು ಪೋಲಿಸ್ ಇಲಾಖೆ ಬಂಧನ ನಡೆಸುವಲ್ಲಿ ಒಂದು ವಾರದೊಳಗೆ ಇಲಾಖೆ ಯಶ್ವಸಿಯಾಗಿದೆ.


ಘಟನೆ ನಡೆದ ಕೆಲವೇ ದಿನದಲ್ಲಿ ಎರಡನೇ ಆರೊಪಿಯಾದ ಮಂಗಲಾ ನಾಯ್ಕ ಬಂಧಿಸಿದ್ದು, ಪ್ರಥಮ ಆರೋಪಿಯನ್ನು ಬಂದಿಸಲು ವಿಶೇಷ ತಂಡವನ್ನು ಈ ಹಿಂದೆ ರಚಿಸಲಾಗಿತ್ತು. ಹಗಲು ರಾತ್ರಿಯೆನ್ನದೆ ಪರಿಶ್ರಮಪಟ್ಟ ಇಲಾಖೆ ಪ್ರಥಮ ಆರೊಪಿ ಎನ್ನುವವರಾದ ಗ್ರಾಮ ಪಂಚಾಯತ ಸದಸ್ಯರಾದ ವಿಮಲಾ ನಾಯ್ಕ ಎನ್ನುವರನ್ನು ಬಂಧಿಸಿದ್ದಾರೆ.

RELATED ARTICLES  ಸಾಗರದಲ್ಲಿ ವಿಪ್ರಜಾಗೃತಿ ಸಮಾವೇಶ ಸಮಾರೋಪ ಸಮಾರಂಭ : ರಾಘವೇಶ್ವರ ಶ್ರೀಗಳ ದಿವ್ಯ ಸಾನಿಧ್ಯ.

ಜಿಲ್ಲಾ ಎಸ್ಪಿ ಮಾರ್ಗದರ್ಶನದಲ್ಲಿ ಎ.ಎಸ್ಪಿ ನಿಖಿಲ್ ಬಿ, ಹೊನ್ನಾವರ ಸಿಪಿಐ ವಸಂತ ಆಚಾರಿ,ಪಿಸೈಗಳಾದ ಸಾವಿತ್ರಿ ನಾಯಕ, ನೀತು ಗೊಡೆ ಹೊನ್ನಾವರ ಮತ್ತು ಮಂಕಿ ಠಾಣಾ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಪೋಲಿಸರ ಈ ಕಾರ್ಯಕ್ಕೆ ತಾಲೂಕಿನಿಂದ ಅಲ್ಲದೇ ಜಿಲ್ಲೆಯ ವಿವಿಧಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.