ಕುಮಟಾ: ನಗರದ ಬಸ್ತಿಪೇಟೆಯಿಂದ ಗಾಂಧಿ ಚೌಕದವರೆಗೆ ಗಾಂಧಿ ಸಂಕಲ್ಪ ಪಾದಯಾತ್ರೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಹಾಗೂ ಕುಮಟಾ ಶಾಸಕರಾದ ದಿನಕರ ಶೆಟ್ಟಿಯವರು ಹಾಗೂ ಬಿಜೆಪಿ ಜಿಲ್ಲಾ ಮುಖಂಡರಾದ ವಿನೋದ ಪ್ರಭು, ವೆಂಕಟೇಶ್ ನಾಯಕ, ಎನ್.ಎಸ್.ಹೆಗಡೆ, ಡಾ.ಜಿ.ಜಿ ಹೆಗಡೆ, ನಾಗರಾಜ ನಾಯಕ ವಕೀಲರು, ನಾಗರಾಜ ನಾಯಕ ತೊರ್ಕೆ, ಗಜಾನನ ಗುನಗಾ, ತಾಲೂಕಾ ಅಧ್ಯಕ್ಷರಾದ ಕುಮಾರ್ ಮಾರ್ಕಂಡೇ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಜಾನನ ಪೈ, ಹೇಮಂತ್ ಕುಮಾರ, ನವೀನಕುಮಾರ್ ಹಾಗೂ ಹಲವಾರು ಬಿಜೆಪಿ ಮುಖಂಡರು ಪಾಲ್ಗೊಂಡರು.

RELATED ARTICLES  ಪರಿಸರ ಜಾಗೃತಿ ಹೆಚ್ಚಲಿ: ಶಾಸಕ ದಿನಕರ ಶೆಟ್ಟಿ

ಸ್ವಾತಂತ್ರ‍್ಯ ಬಂದ ನಂತರ, ಗಾಂಧಿ ನಿಧನದ ನಂತರ ಹುಸಿ ಗಾಂಧಿವಾದದ ದೊಡ್ಡ ಮೇಳ ಶುರುವಾಯಿತು. ಅವರ ತತ್ವ, ನಿಷ್ಠೆಗಳನ್ನು ಪಾಲಿಸದೇ, ರಾಜಕೀಯವಾಗಿ ಅವರ ಹೆಸರನ್ನು ಬಳಸಿಕೊಂಡರು. ಇದನ್ನೇ ಜನರಿಗೂ ನಂಬಿಸುತ್ತಾ ಬಂದರು. ಅದು ಜನರ ಅರವಿಗೂ ಬರಲಿಲ್ಲ. ಗಾಂಧೀಜಿ ದೇಶದಲ್ಲಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಒಂದು ದೇವಸ್ಥಾನ ಕಟ್ಟುವುದರಿಂದ ರಾಮರಾಜ್ಯ ಸ್ಥಾಪನೆ ಆಗುವುದಿಲ್ಲ’ ಎಂದೂ ಹೇಳಿದರು. ‘ಪ್ರಧಾನಿ ಮೋದಿಯವರು ತೆಗೆದಕೊಂಡಿರುವ ಕ್ರಾಂತಿಕಾರಕ ಹೆಜ್ಜೆಯನ್ನು ಈ ಹಿಂದೆ ಯಾರೂ ತೆಗೆದುಕೊಂಡಿರಲಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಳ್ಳುವಂಥ ಅವರ ಗುಣ ಜಗತ್ತಿನ ಯಾವ ರಾಜಕಾರಣಿಯಲ್ಲಿಯೂ ಇಲ್ಲ’ ಎಂದು ಗಣ್ಯರು ಅಭಿಪ್ರಾಯ ಪಟ್ಟರು.

RELATED ARTICLES  ಅಬ್ಬಾ..!! ಕಾರವಾರದ ಮನೆಯೊಂದರಲ್ಲೇ ಇತ್ತಂತೆ 2440 ಲೀಟರ್ ಗೋವಾ ಮದ್ಯ