ಕುಮಟಾ : ಸತ್ವಾಧಾರ ಫೌಂಡೇಶನ್(ರಿ) ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 19 ಶನಿವಾರ ಮಧ್ಯಾಹ್ನ 04 : 30 ರಿಂದ 06 : 30 ರ ವರೆಗೆ ಕುಮಟಾ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರು ಹಾಗೂ ಕಲಾವಿದರು, ರಂಗಕರ್ಮಿ ಕಾಸರಗೋಡು ಚಿನ್ನಾ ಅವರ ಜೊತೆಗೆ ಮುಕ್ತ ಮಾತುಕತೆಯ ದೃಷ್ಟಿಕೋನವನ್ನಿಟ್ಟು “ಭಾಷಾಂತರ” ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೊಂದು ಮುಕ್ತ ಸಂವಾದ ಕಾರ್ಯಕ್ರಮವಾಗಿದ್ದು ಕಾಸರಗೋಡು ಚಿನ್ನಾ ಅವರ ಜೊತೆಗೆ ಭಾಷಾ ಬಾಂಧವ್ಯ ಹಾಗೂ ಪ್ರಸ್ತುತ ಸಮಸ್ಯೆಗಳ ಕುರಿತಾದ ಪ್ರಶ್ನೊತ್ತರಕ್ಕೆ ಅವಕಾಶ ನೀಡಲಾಗಿದೆ.

ಉತ್ತರ ಕನ್ನಡ ವೈವಿಧ್ಯಮಯ ಭಾಷೆಗಳ ಜನರನ್ನು ಹೊಂದಿದ್ದು ಆ ಭಾಷೆಗಳ ನಡುವೆ ಸಾಮರಸ್ಯ ಹೇಗಿರುತ್ತದೆ, ಸಾಮರಸ್ಯದ ಮೂಲ ನಡಾವಳಿಗಳು ಹೇಗೆ, ನಮ್ಮ ಬದುಕು ಭಾಷೆಯೊಂದಿಗೆ ಬೆಸೆದಿರುವ ರೀತಿ, ಪರಸ್ಪರ ಭಾಷಿಕರ ಹೊಂದಾಣಿಕೆ ಬಗ್ಗೆ ಮುಕ್ತವಾದ ಮಾತುಕತೆ ನಡೆಸಲು ಈ ವೈವಿದ್ಯಮಯ ಕಾರ್ಯಕ್ರಮ ರೂಪಿತವಾಗಿದೆ. ಕಾಸರಗೋಡು ಚಿನ್ನಾ ಅವರ ಜೀವನದ ಅನುಭವಗಳು ಹಾಗೂ ಹಾಸ್ಯ ಸನ್ನಿವೇಶಗಳು ಘಟನಾವಳಿಗಳನ್ನು ಸಚಿತ್ರವಾಗಿ ಚಿತ್ರಿಸುವುದರ ಮೂಲಕ ಹಾಸ್ಯ ಲಾಸ್ಯದ ಜೊತೆಗೆ ಗೀತ ಸಂಗೀತವನ್ನು ಸೇರಿಸಿ ಮನೀಜ್ಞ ರೀತಿಯಲ್ಲಿ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ .

RELATED ARTICLES  ಬಂಧಿಸಿದ 15 ಜನರಲ್ಲಿ 12 ಜನ ಗಾಂಜಾ ಸೇವನೆ ಮಾಡಿದ್ದು ದೃಢ

ಕನ್ನಡ ಹಾಗೂ ಕೊಂಕಣಿ ಭಾಷಿಕರ ನಡುವಿನ ಬಾಂಧವ್ಯ ಹಾಗೂ ಭಾಷೆ ಭಾಷೆಗಳ ನಡುವೆ ಇರಬೇಕಾದ ಸಂಬಂಧಗಳ ಕುರಿತು ಹಾಗೂ ಭಾಷಾ ಬಾಂಧವ್ಯದ ಕುರಿತಾದ ಚರ್ಚೆಗಳಿಗೆ ಮುಕ್ತ ಅವಕಾಶವಿದ್ದು ಸಾರ್ವಜನಿಕರೂ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಪ್ರಶ್ನೆ ಕೇಳುವ ಮುಕ್ತ ಅವಕಾಶ ನೀಡಲಾಗಿದೆ .

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳು ಹಾಗೂ ಕೊಂಕಣ ಎಜುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ಪ್ರಸಿದ್ಧ ವೈದ್ಯರಾದ ಎಂ. ವಿ ಮೂಡಲಗಿರಿ ಹಾಗೂ ಸಮಾಜ ಸೇವಕರಾದ ಸುಧಾ ಗೌಡ ಭಾಗವಹಿಸಲಿದ್ದಾರೆ.

RELATED ARTICLES  ಇಂದಿನಿಂದ ಗೋಕರ್ಣದಲ್ಲಿ ಮಹಾಶಿವರಾತ್ರಿ ಮಹೋತ್ಸವ: ಒಂಬತ್ತು ದಿನಗಳ ಕಾಲ ನಡೆಯಲಿದೆ ಕಾರ್ಯಕ್ರಮಗಳು

ಕೊಂಕಣಿ ಹಾಗೂ ಕನ್ನಡ ಗೀತೆಗಳನ್ನು ವಿದ್ಯಾರ್ಥಿಗಳು ಪ್ರಚುರಪಡಿಸಲಿದ್ದಾರೆ . ಭಾಷಾ ಬಾಂಧವ್ಯದ ಕುರಿತಾಗಿ ಚರ್ಚಿಸುವ ಜೊತೆಗೆ ಕಾಸರಗೋಡು ಚಿನ್ನ ಅವರ ಜೀವನ ಬದುಕು ಬರಹಗಳ ಕುರಿತಾಗಿ ಮುಕ್ತ ಮಾತುಕತೆ ಇಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸುವಂತೆ ಸಂಘಟಕರಾದ ಗಣೇಶ ಜೋಶಿ , ಡಾ ಶ್ರೀಧರ ಗೌಡ ಉಪ್ಪಿನಗಣಪತಿ, ಚಿದಾನಂದ ಭಂಡಾರಿ, ರವೀಂದ್ರ ಭಟ್ ಸೂರಿ ಹಾಗೂ ಜಯದೇವ ಬಳಗಂಡಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ