ಕುಮಟಾ: ತಂದೆ-ತಾಯಿ, ಗುರು ಹಿರಿಯರ ಮಾತು ಕಹಿಯೆನಿಸಿದರೂ ಅದರಾಚೆಗಿನ ಒಳಿತನ್ನು ಅರಿತು ಅದನ್ನು ಪಾಲಿಸಿದರೆ ಅದು ಸ್ವಾತಂತ್ರ್ಯದ ಉಲ್ಲಂಘನೆಯಾಗದು. ಮಕ್ಕಳಾದವರು ಸ್ವೇಚ್ಛಾಚಾರ ಮತ್ತು ಸ್ವಾತಂತ್ರ್ಯದ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಿ ಹಿರಿಯರ ಮಾತಿನ ಹಿಂದಿನ ಕಾಳಜಿ ಅರಿತು ನಡೆದರೆ ಸುಂದರ ಭವಿತವ್ಯ ರೂಪಿಸಿಕೊಳ್ಳಬಹುದೆಂದರು. ಸ್ವಾತಂತ್ರ್ಯ ಪಡೆಯಲು ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿ ಮಾತನಾಡಿದರು. ಪ್ರಸ್ತುತ ರಾಷ್ಟ್ರದ ಸಾಧನೆ ಮತ್ತು ಪ್ರಗತಿಯ ದಾಪುಗಾಲನ್ನು ಉದಾಹರಿಸಿದರು. ಬದಲಾವಣೆ ಬಯಸುವ ದೇಶದ ನವನಿರ್ಮಾಣಕ್ಕೆ ಸಜ್ಜುಗೊಳ್ಳಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕಾಗಿದೆ ಎಂದು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಧ್ವಜಾರೋಹಣಗೈದು ಮೇಲಿನಂತೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಏರ್ಪಡಿಸಿದ ದೇಶಭಕ್ತಿ ಗೀತೆ ಗಾಯನ ಹಾಗೂ ಭಾರತ ನಕಾಶೆ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿ ಪ್ರತಿನಿಧಿ ವಿಶ್ವಾಸ ಪೈ ರಕ್ಷಕ ಕವಚ ನೀಡಿದರು.
ದೈಹಿಕ ಶಿಕ್ಷಕ ಎಲ್.ಎನ್.ಅಂಬಿಗ, ಪ್ರಶಾಂತ ಗಾವಡಿ ಧ್ವಜಾರೋಹಣಕ್ಕೆ ನೆರವಾದರು. ಅತಿಥಿಗಳಾಗಿ ಶಾಲೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತ ಸಿಬ್ಬಂದಿಗಳಾದ ಬಿ.ಎನ್.ಪೈ ಮತ್ತು ಅಶೋಕ ಭಂಡಾರಿ ಆಗಮಿಸಿ ಸಿಹಿ ತಿಂಡಿ ವಿತರಿಸಿದರು.