ಕಾರವಾರ : ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕೆ ಸಾವರ್ಕರ್ ಅವರನ್ನು ೪೮ ವರ್ಷ ಕಠಿಣ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿದ್ದರು. ಬ್ರಿಟೀಷರೊಂದಿಗೆ ಕೈ ಜೋಡಿಸಿದ್ದರೆ ಅವರಿಗೂ ಒಳ್ಳೆಯ ಸತ್ಕಾರವನ್ನ ಬ್ರಿಟೀಷರು ಮಾಡುತ್ತಿದ್ದರು. ಸಿದ್ದರಾಮಯ್ಯ ನವರಿಗೆ ಖರ್ಚಿಗೆ ಹಣ ಕೊಡ್ತೇವೆ. ಸೆಲ್ಯುಲರ್ ಜೈಲಿಗೆ ಹೋಗಿ ಇತಿಹಾಸದ ವಾಸ್ತವಿಕ ಸ್ಥಿತಿ ಅರ್ಥ ಮಾಡಿಕೊಳ್ಳಲಿ’ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
‘ಸಿದ್ದರಾಮಯ್ಯ ಸಾವರ್ಕರ್ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆಂದು ಹೇಳಿದ್ದಾರೆ. ಸಾವರ್ಕರ್ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು ಅಂದಿನ ಸಮಯದ ತಂತ್ರಗಾರಿಕೆ’ ಅಂತಹ ಅನೇಕ ಘಟನೆ ಕಾಂಗ್ರೆಸ್ನವರದ್ದು ಇದೆ ಎಂದರು.
‘ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ಇವರು ಮಾತ್ರ ಸ್ವಾತಂತ್ರ್ಯ ತಂದು ಕೊಟ್ಟವರು ಎಂದು ಇತಿಹಾಸವನ್ನ ಅರ್ಧ ತೋರಿಸುವ ಪ್ರಯತ್ನ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಕೆಲಸ ಹಲವರು ಮಾಡಿದ್ದರೂ ಅವರನ್ನ ಮರೆ ಮಾಚುವ ಕೆಲಸ ಕಾಂಗ್ರೆಸ್ ಮಾಡಿದೆ’ ಎಂದರು.
‘ರಾಜ್ಯದ ವಿವಿಧ ಅಕಾಡೆಮಿಗಳಿಗೆ ನೇಮಕಾತಿಯಲ್ಲಿ ಯೋಗ್ಯರನ್ನೇ ನೇಮಕ ಮಾಡಲಾಗಿದೆ. ದೇಶದ ವಿರುದ್ಧ ಮಾತನಾಡುವ ತುಕಡೆ ಗ್ಯಾಂಗಿನವರಿಗೆ ನಾವು ಬೆಂಬಲ ಕೊಟ್ಟಿಲ್ಲ ಎಂದು ಕಿಡಿ ಕಾರಿದರು.
ಉತ್ತರ ಕನ್ನಡದಲ್ಲಿ ಮಾತ್ರ ದೊರೆಯುವ ವಿಶಿಷ್ಟ ಉತ್ಪನ್ನಗಳ ಮಾರಾಟ ಮಳಿಗೆಗೆ ಭೇಟಿನೀಡಿದ ಅವರು ನೆಲಸಿರಿ ಉತ್ತರ ಕನ್ನಡ ಉತ್ಪನ್ನ ಮಳಿಗೆಯ ಬಗ್ಗೆ ಮಾಹಿತಿ ಪಡೆದರು ತಮ್ಮ ಜಿಲ್ಲೆಯಲ್ಲೂ ಇಂಥದ್ದೇ ಮಳಿಗೆ ತೆರಯುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಡಲತೀರದಲ್ಲಿರುವ ರಾಕ್ ಗಾರ್ಡನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಪ್ರಮುಖರಾದ ಗಣಪತಿ ಉಳ್ವೇಕರ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಪುರುಷೋತ್ತಮ, ರವಿ, ಮುಜರಾಯಿ ಇಲಾಖೆಯ ಸುರೇಶ್ ಸೇರಿದಂತೆ ಅನೇಕರು ಇದ್ದರು.