ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಮಿನಿ ವಿಧಾನಸೌದದ ಎದುರಿಗಿರುವ ಪುಟಪಾತ್ ಸಮೀಪ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದನ ಮೇಲೆ ಜವರಾಯನ ರೂಪದಲ್ಲಿ ಟಿಪ್ಪರ್ ಬಂದೆರಗಿದೆ.
ಎಂದಿನಂತೆ ರವಿವಾರವು ಅಲ್ಲೆ ವಾಸ್ತವ್ಯ ಮಾಡಿದ್ದ ವ್ಯಾಪಾರಸ್ಥ ತಡರಾತ್ರಿ ೧೧ ಗಂಟೆ ಸುಮಾರಿಗೆ ಮರಳು ತುಂಬಿದ ಟಿಪ್ಪರ್ ಏಕಾಏಕಿ ನುಗ್ಗಿದ ಪರಿಣಾಮ ಸ್ತಳದಲ್ಲಿಯೇ ಮ್ರತಪಟ್ಟ ಧಾರುಣ ಘಟನೆ ಸಂಭವಿಸಿದೆ.
ಕೂಡಲೆ ಸ್ತಳಕ್ಕೆ ದೌಡಾಯಿಸಿದ ಹೊನ್ನಾವರ ಪೋಲಿಸರು ಹಾಗು ಸಮೀಪದಲ್ಲಿರುವ ಸಾರ್ವಜನಿಕರು ವ್ಯಾಪಾರಿಯನ್ನು ರಕ್ಷಣೆಗೆ ಮುಂದಾದರೂ ಅಷ್ಟರಲ್ಲೆ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.