ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ಪರ್ವಕಾಲದಲ್ಲಿ  ದಿನಾಂಕ 21-10-2019 ಸೋಮವಾರ ಮುಂಜಾನೆ  ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ  ಸಂಪನ್ನಗೊಂಡಿತು . 

ಇಂದು ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ
ಗಂಗಾಮಾತಾ ದೇವಾಲಯಕ್ಕೆ ಉತ್ಸವವು ತೆರಳಿತು .(ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ). ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ  ಭಕ್ತ ಜನರ  ಸಮ್ಮುಖದಲ್ಲಿ  ಗಂಗಾಮಾತಾ ದೇವಾಲಯದಲ್ಲಿ  ಶಿವ-ಗಂಗೆಯರ ಸಂವಾದ ಜರುಗಿತು . ನಂತರ  ಗಂಗಾಮಾತೆಯು ಮಹಾಬಲೇಶ್ವರನನ್ನು ಮದುವೆಯಾಗುವುದಾಗಿ ನಿಶ್ಚಿತಾರ್ಥ ತಾಂಬೂಲೋತ್ಸವವು ಜರುಗಿತು . ವೇ ಶಿವ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು . 
ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ  ‘ಶಿವಗಂಗಾ’ ವಿವಾಹ ಮಹೋತ್ಸವವು ದಿನಾಂಕ  27-10-2019 ರವಿವಾರ   (ಆಶ್ವೀಜ ಬಹುಳ ಚತುರ್ದಶಿಯಂದು)  ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ನೆರವೇರುತ್ತದೆ.

RELATED ARTICLES  ಹೊನ್ನಾವರ ತಾಲೂಕಾ `9ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಆಯ್ಕೆ.