ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳವರೆ ಇಲ್ಲಿನ ಶಿಕ್ಷಕಿ ನಮೃತಾ ಬಿ ನಾಯಕರವರು ವರ್ಗಾವಣೆಗೊಂಡು ಸ.ಕಿ.ಪ್ರಾ ಶಾಲೆ ಕೃಷ್ಣಾಪುರಕ್ಕೆ ತೆರಳುವಂತಹ ಸಂದರ್ಭದಲ್ಲಿ ಅವರನ್ನು ಶಾಲೆಯಲ್ಲಿ ಬಿಳ್ಕೋಡುವ ಸಂದರ್ಭದಲ್ಲಿ ಅಲ್ಲಿ ಶಿಕ್ಷಕರು, ಮಕ್ಕಳು, S.ಆ.ಒ.ಅ ಸದಸ್ಯರು ಮತ್ತು ಊರನಾಗರಿಕರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮನಕಲುಕುವಂತಿತ್ತು.


ಇದೇ ಶಾಲೆಯಲ್ಲಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ನಮೃತಾರವರು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದು, ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ವಿಶೇಷವಾಗಿ ಸರಕಾರಿ ಕನ್ನಡ ಮಾಧ್ಯಮದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಬಹಳ ಶ್ರಮಿಸುತ್ತಿದ್ದರು. ಇಲ್ಲಿನ ಮಕ್ಕಳಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಉನ್ನತ ಮಟ್ಟಕ್ಕೆ ಬರಲು ಬಹಳ ಕಾಳಜಿ ವಹಿಸುತ್ತಿದ್ದರು. ಶಾಲಾ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳೋಪಾದಿಯಲ್ಲಿ ನೋಡಿಕೊಳ್ಳುತ್ತಿದ್ದರು. ಪ್ರೀತಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರು. ಕಾರಣ S.ಆ.ಒ.ಅ ಯವರು, ಯುವಕ ಸಂಘದವರು, ಪಾಲಕರು ಕಣ್ಣೀರು ಸುರಿಸುತ್ತಾ ಪುನಃ ತಮ್ಮ ಶಾಲೆಗೆ ಬರುವಂತಾಗಲಿ ಎಂದು ಆಶಿಸುತ್ತಾ ಶಿಕ್ಷಕಿಯನ್ನು ಬಿಳ್ಕೋಟ್ಟರು.

RELATED ARTICLES  ಹೋಳಿ ಹಬ್ಬದ ಸಂಭ್ರಮ ಗಂಗಾವತಿಯಲ್ಲಿ ಈ ಯುವಕನ ಪಾಲಿಗೆ ಮೃತ್ಯು ತಂದಿತೇ.?


ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಅನಿತಾ ಪಿ ಕೇಣಿ, ಶಿಕ್ಷಕಿಯರಾದ ಶೋಭಾ ಶಾನಭಾಗ, ಬಿ.ಪಿ.ಗೌಡ, ಪ್ರಸನ್ನ ಗೌಡ, S.ಆ.ಒ.ಅ ಅಧ್ಯಕ್ಷ ನಾರಾಯಣ ಗೌಡ, ಯುವಕ ಸಂಘದ ಗಿರೀಶ ಅಂಬಿಗ, ನಾಗೇಶ ಅಂಬಿಗ ಹಾಗೂ ಪದಾಧಿಕಾರಿಗಳು, ಶಾಲಾ ಅಡುಗೆ ಸಿಬ್ಬಂದಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.

                         ವರದಿ: ಎನ್ ರಾಮು ಹಿರೇಗುತ್ತಿ