ಕಾರವಾರ: ಉ.ಕ ಜಿಲ್ಲೆಯಲ್ಲಿ ಅ.22 ರಿಂದ ಅ.25 ರವರೆಗೆ ಭಾರೀ ಮಳೆ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಅಪರ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿ ಆದೇಶಿಸಿದ್ದಾರೆ.

RELATED ARTICLES  ಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಕಡಿಮೆಯಾಗುತ್ತಾ?

ಈ ದಿನಗಳಂದು ಎಲ್ಲಾ ಕಂಟ್ರೋಲ್ ರೋಮುಗಳನ್ನು 24 ಗಂಟೆಗಳ ಕಾಲ ತೆರದಿಡಬೇಕು ಹಾಗೆಯೇ ತಹಶೀಲ್ದಾರರು  ಕೇಂದ್ರ ಸ್ಥಾನದಲ್ಲಿದ್ದು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ಕುರಿತು ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಲು ತಿಳಿಸಿದೆ ಎಂದು ಜಿಲ್ಲಾಧಿಕಾರಿ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಮನೆಗೊಂದು ಗಿಡ ಮನಸಿಗೊಂದು ಪುಸ್ತಕ ಕಾರ್ಯಕ್ರಮ.