ಕುಮಟಾ: ಸಮಾಜದಲ್ಲಿ ಹೆಣ್ಣು ಮಕ್ಕಳ ಅಗತ್ಯತೆ, ಶಿಕ್ಷಣ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಆ ಮೂಲಕ ನಾಳಿನ ಭವಿತವ್ಯಕ್ಕಾಗಿ ಅವರನ್ನು ಸಬಲೀಕರಣಗೊಳಿಸುವುದು ಆದ್ಯ ಕರ್ತವ್ಯವಾಗಬೇಕು ಎಂದು ಇಲ್ಲಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯರಾದ ಮೋಹನಕುಮಾರಿ ಎನ್.ಬಿ. ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕೆನರಾ ಎಜುಕೇಶನ್ ಸೊಸೈಟಿ (ರಿ) ಕುಮಟಾ ಸಹಯೋಗದಲ್ಲಿ ಹಮ್ಮಿಕೊಂಡ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 102 ಜನರಿಗೆ ಕರೋನಾ ಪಾಸಿಟಿವ್

ಹೆಣ್ಣು ಮಕ್ಕಳು ಎದುರಿಸುವÀ ಗೃಹ ಹಿಂಸೆ, ಬೇಧ-ಭಾವ, ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹದಂತಹ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಯಾವುದೇ ಕಾರಣಕ್ಕೂ ಸಂಕಷ್ಟಕ್ಕೀಡಾಗದೇ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಂಡು ಬಾಳಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಹೆಗಡೆ ಕಾನೂನಿನಡಿಯಲ್ಲಿ ಹೆಣ್ಣು ಮಕ್ಕಳಿಗೆ ಲಭ್ಯವಿರುವ ಮಾಹಿತಿ ಒದಗಿಸಿದರು. ಹೆಣ್ಣು ತನಗೆ ತಾನೇ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಸಹಾಯಕ ಸರಕಾರಿ ಅಭಿಯೋಜಕ ಮಂಜುನಾಥ ಎಚ್.ನಾಯ್ಕ ಒತ್ತಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಮಾಜದಲ್ಲಿ ಹೆಣ್ಣನ್ನು ನಕಾರಾತ್ಮಕ ದೃಷ್ಠಿಕೋನದಿಂದ ನೋಡದೇ ಸಕಾರಾತ್ಮಕವಾಗಿ ನೋಡಿ ಹೆಣ್ಣುಮಕ್ಕಳ ರಕ್ಷಣೆಗೆ ನಮ್ಮ ಪ್ರಸ್ತುತ ಸಮಾಜ ಮುಂದಡಿಯಿಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ನ್ಯಾಯವಾದಿ ರಾಘವಿ ಜಿ. ನಾಯಕ ‘ಹೆಣ್ಣು ಮಕ್ಕಳ ಸಂರಕ್ಷಣೆ ಕುರಿತು ಕಾನೂನು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರಲ್ಲದೇ ಕೊನೆಯಲ್ಲಿ ಹೆಣ್ಣು ಮಕ್ಕಳೊಡನೆ ಸಂವಾದಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಶ್ರೀರಶ್ಮಿ ಭಟ್ಟ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರೆ ಶಿಕ್ಷಕ ಸುರೇಶ ಪೈ ವಂದಿಸಿದರು. ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ದುಬೈಗೆ 2.60 ಕೋಟಿ ರೂ ವಜ್ರಗಳನ್ನು ಸಾಗಿಸುತ್ತಿದ್ದ ಭಟ್ಕಳ ಮೂಲದ ಇಬ್ಬರು ಅರೆಸ್ಟ್