ಕುಮಟಾ: ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಡಾ.ಎ.ವಿ.ಬಾಳಿಗಾ ಪದವಿಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಭಟ್ಕಳದ ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಶಿರಸಿಯ ನಗರಸಭೆ ಈಜುಕೊಳದಲ್ಲಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ನಡೆದಿತ್ತು.

RELATED ARTICLES  ನಿರಾಶ್ರಿತ ಕನ್ನಡಿಗರ ಶಾಶ್ವತ ಪುನರ್ವಸತಿ: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು’

ಇದರಲ್ಲಿ ಭಾಗವಹಿಸಿದ ಕಾಲೇಜಿನ ವಸಂತ ದೇವಾಸಿ 50 ಮೀ. ಬ್ಯಾಕ್‌ಸ್ಟೊಕ್‌ನಲ್ಲಿ ದ್ವಿತೀಯ, 100 ಮೀ. ಪ್ರಿ ಸ್ಟೆöಲ್ ತೃತೀಯ, 4×100 ಮೀ. ಪ್ರಿ ಸ್ಟೆöಟ್ಲ್ ರಿಲೆಯಲ್ಲಿ ಪ್ರಥಮ, 4×100 ಮೀ. ರಿಲೆ ವೈಯಕ್ತಿಕ ವಿಭಾಗದಲ್ಲಿ ಪ್ರಥಮ, ಇಹ್ತಿಶಾಮುಲ್ ಹಕ್ 100 ಮೀ. ಬ್ಯಾಕ್ ಸ್ಟೊಕ್‌ನಲ್ಲಿ ದ್ವಿತೀಯ, ಅನೂಪ ನಾಯಕ 100 ಮೀ. ಬ್ಯಾಕ್ ಸ್ಟೊಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

RELATED ARTICLES  ಅಪರಿಚಿತ ಶವವನ್ನು ಕೊತ್ತೊಯ್ದ ಮೊಸಳೆ..!