ಉ.ಕ :  ನಿರಂತರ ಮಳೆ, ಗಾಳಿ ಮತ್ತು ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ಉತ್ತರ ಕನ್ನಡ ಅಕ್ಷರಶಃ ತತ್ತರಿಸಿದೆ. ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಕಾರವಾರದಲ್ಲಿ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದ್ದು ಗಾಳಿಯ ರಭಸವೂ ಹೆಚ್ಚಿದೆ.
ನಗರದ ಸೋನಾರವಾಡ, ಕೆಎಚ್ ಬಿ ಕಾಲೋನಿ, ಚಿತ್ತಾಕುಲ ಕ್ರಾಸ್ ಬಳಿ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ.

RELATED ARTICLES  ಶಿರಸಿ‌ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರ ಮನೆಯ ಮುಂದೆ ಮಾಟ ಮಂತ್ರ? ಜನತೆಯಲ್ಲಿ ಆತಂಕ

ಕುಮಟಾ ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ನಿರಂತರವಾಗಿ ಸುರಿದ ಮಳೆಗೆ ಭತ್ತದ ಗದ್ದೆಗಳು ಜಲಾವೃತ್ತವಾಗಿವೆ

ಭಟ್ಕಳದ ಕಾಯ್ಕಿಣಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಲ ಮನೆಗಳಿಗೆ ತೀವೃ ಹಾನಿಯಾಗಿದೆ. ಅಲ್ಲದೆ ಅಳಿವೆಕೋಡಿ, ತೆಂಗಿನಗುಂಡಿ ಹಾಗೂ ಮುಂಡಳ್ಳಿ ಭಾಗದಲ್ಲಿ ಸಮುದ್ರದಲ್ಲಿ ಲಂಗರು ಹಾಕಿದ್ದ ದೋಣಿಗಳು ಅಲೆಗಳ ರಭಸಕ್ಕೆ ಪರಸ್ಪರ ಡಿಕ್ಕಿಯಾಗ ಹಾನಿಯಾಗಿವೆ.

RELATED ARTICLES  ವಿಜ್ಞಾನ ಬೋಧನಾ ಶಿಕ್ಷಕರ ಸಂಘ : ನೂತನ ಪದಾಧಿಕಾರಿಗಳ ನೇಮಕ ಮತ್ತು ಸನ್ಮಾನ

ಮುರುಡೇಶ್ವರದಲ್ಲಿ ಸಮುದ್ರದಂಚಿನ ಕೆಲ ಗೂಡಂಗಡಿಗಳು ಅಲೆಗಳ ರಭಸಕ್ಕೆ ಜಲಾವೃತ್ತಗೊಂಡಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.