ಕುಮಟಾ: ಬಹುಪಾಲು ಗ್ರಾಮೀಣ ಭಾಗದಲ್ಲಿ ಸುಪ್ತವಾಗಿರುವ ಮಿಂಚು ಪ್ರತಿಭೆಗಳನ್ನು ಹೊರಜಗತ್ತಿಗೆ ಆಕಾಶವಾಣಿ ನಿಲಯದ ಮೂಲಕ ಪರಿಚಯಿಸಿದ ಕೀರ್ತಿ ಹೊಂದಿದವರೂ ಸ್ವತಃ ಉದ್ದಾಮ ಸಾಹಿತಿಗಳೂ ಆದ ಜಿ.ಕೆ.ರವೀಂದ್ರ ಕುಮಾರ ಅವರ ಬದುಕು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ ಎಂದು ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ.ಭಟ್ಟ ಹಾಸಣಗಿ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಭಾ.ಸಾ.ಪ., ಸನದಿ ಸಾಹಿತ್ಯ ಸಂಘ ಹಾಗೂ ರೋಟರಿ ಕ್ಲಬ್ ಹಮ್ಮಿಕೊಂಡ ಜಿ.ಕೆ.ರವೀಂದ್ರ ಕುಮಾರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಆಕಾಶವಾಣಿ ಕೇಂದ್ರ ಕಾರವಾರದಲ್ಲಿ ಕಾರ್ಯಮಾಡುತ್ತಿರುವಾಗ ಹಳ್ಳಿಯ ಅದರಲ್ಲೂ ಮುಖ್ಯವಾಗಿ ಯುವಪ್ರತಿಭೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

RELATED ARTICLES  ಎಸ್.ಎಸ್.ಎಲ್.ಸಿ ಫಲಿತಾಂಶ :ಉತ್ತಮ‌ ಸಾಧನೆ ತೋರಿದ ಮುರ್ಡೇಶ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ತಮ್ಮ ಮತ್ತು ಅವರ ನಡುವಿನ ನಿಕಟ ಸಂಬಂಧವನ್ನು ಮೆಲಕು ಹಾಕಿದರು. ತಮಗೆ ಗೊತ್ತೇ ಇರದ ಗಣ್ಯ ವ್ಯಕ್ತಿಯ ಜೀವನ ಚರಿತ್ರೆ ಮತ್ತು ಸಾಧನೆಯನ್ನು ಮುಮ್ಮೊದಲು ಅರಿಯುವ ಮೂಲಕ ಮರಣದ ನಂತರವೂ ವ್ಯಕ್ತಿ ಬದುಕುಳಿಯಲು ಸಾಧ್ಯವೆಂಬ ಮಾತನ್ನು ಇಂಥವರಿಂದ ಅರ್ಥ ಮಾಡಿಕೊಳ್ಳಬಹುದೆಂದು ಸನದಿ ಸಾಹಿತ್ಯ ಸಂಘದ ಅಧ್ಯಕ್ಷ ಎನ್.ಆರ್.ಗಜು ಉದಾಹರಿಸಿದರು.

ನಾದಶ್ರೀ ಕಲಾಕೇಂದ್ರದ ವಿದ್ಯಾರ್ಥಿಗಳೊಡನೆ ಧ್ವನಿ ಮುದ್ರಿತ ಕಾರ್ಯಕ್ರಮದಲ್ಲಿ ತಾನು ಅವರನ್ನು ನೋಡಿದ್ದಾಗಿ ರೋಟರಿ ಅಧ್ಯಕ್ಷ ಸುರೇಶ ಭಟ್ಟ ಸ್ಮರಿಸಿಕೊಂಡರು. ನಿವೃತ್ತಿಗೂ ಮೊದಲು ಅವರ ಅಕಾಲಿಕ ನಿಧನಕ್ಕಾಗಿ ಮರುಗಿದರು. ಸನದಿ ಸಾಹಿತ್ಯ ಸಂಘದ ಸದಸ್ಯರಾದ ಚುಟುಕು ಕವಿ ಬೀರಣ್ಣ ನಾಯಕ ಹೆರವಟ್ಟಾ, ಸದಸ್ಯ-ಶಿಕ್ಷಕರಾದ ವಿಷ್ಣು ಭಟ್ಟ, ಕಿರಣ ಪ್ರಭು, ಕೆ.ಅನ್ನಪೂರ್ಣ, ಭರತ ಭಟ್ಟ, ವಿದ್ಯಾರ್ಥಿಗಳಾದ ಮುಕ್ತಾ ಭಟ್ಟ, ನಿವೇದಿತಾ ಪಟಗಾರ, ಪ್ರಜ್ಞಾ ಆಚಾರಿ, ಸಾತ್ವಿಕ ಭಟ್ಟ ಹಾಗೂ ಸನದಿ ಸಾಹಿತ್ಯ ಸಂಘದ ಸಂಚಾಲಕ ಸುರೇಶ ಪೈ ಜಿ.ಕೆ.ರವೀಂದ್ರ ಕುಮಾರ ಅವರಿಂದ ರಚಿತವಾದ ಕವನ ಮತ್ತು ಚುಟುಕುಗಳನ್ನು ವಾಚಿಸಿ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಗೌರವ ಸಲ್ಲಿಸಿದರು.

RELATED ARTICLES  ಚಳಿ ಚಳಿ ತಾಳೆನೋ ಈ ಚಳಿಯಾ!!! ಉತ್ತರ ಕನ್ನಡದಲ್ಲಿ ಚಳಿ ಎಫೆಕ್ಟ!