ಮಂಗಳೂರು : ಸಾಮಾಜಿಕ ಕಾಳಜಿ,ಸೇವಾ ಮನೋಭಾವ, ಸ್ನೇಹಪರ ಸ್ವಭಾವಕ್ಕೆ ಹೆಸರಾಗಿರುವ ಬೀದರ್‍ಜಿಲ್ಲಾ ಮುಖ್ಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀಮತಿ ಮಂಗಲಾ ಭಾಗ್ವತ್‍ಅವರಿಗೆರಾಜ್ಯ ಮಟ್ಟದ ಪ್ರತಿಷ್ಠಿತಡಾಕ್ ಸೇವಾ ಪ್ರಶಸ್ತಿ ಲಭಿಸಿದೆ.ಮೂರು ದಶಕಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಲಾ ಭಾಗವತ್‍ಅವರು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕವೇ ಎಲ್ಲರಿಗೂ ಪರಿಚಿತರಾದವರು.ಸರ್ಕಾರಿ ಕೆಲಸ ಕಾರ್ಯ ನಿಮಿತ್ತಕಛೇರಿಗೆ ಬರುವ ಸಾರ್ವಜನಿಕರನ್ನು ಆಪ್ತವಾಗಿ ಮಾತನಾಡಿಸಿ, ಕೆಲಸ ಮಾಡಿಕೊಡುತ್ತಾರೆ.ಎಂಬ ಹೆಗ್ಗಳಿಕೆ ಮಂಗಲಾ ಭಾಗವತ್‍ಅವರಿಗಿದೆ.ರಾಜ್ಯ ಮಟ್ಟದ‘ಡಾಕ್ ಸೇವಾ ಪ್ರಶಸ್ತಿ’ಗೆ ಆಯ್ಕೆಯಾದ“ಕಲ್ಯಾಣಕರ್ನಾಟಕದ ಮೊದಲ ಮಹಿಳೆ” ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅಂಚೆ ಇಲಾಖೆಯಲ್ಲಿ ಪ್ರತಿ ವರ್ಷ ಅಂಚೆ ಸಪ್ತಾಹದ ಸಂದರ್ಭದಲ್ಲಿ ಈ ಪ್ರತಿಷ್ಠಿತಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಈ ಬಾರಿ ಮಂಗಳೂರಿನಲ್ಲಿ ನಡೆದ ಕರ್ನಾಪೆಕ್ಸ್-2019 ಕಾರ್ಯಕ್ರಮದಲ್ಲಿಈ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಾಲ್ಕು ದಿನಗಳ ಅಂಚೆ ಚೀಟಿ ಸಂಗ್ರಹಗಳ ಪ್ರದರ್ಶನವನ್ನು ನ್ಯಾ.ಸಂತೋಷ ಹೆಗಡೆ ಉದ್ಘಾಟಿಸಿದರು.ಅಂಚೆ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕ ವಿಶ್ವಪವನಪತಿಯವರು ಪ್ರಶಸ್ತಿ ಪ್ರಧಾನ ಮಾಡಿದರು.ಜನರಲ್‍ಚಾಲ್ರ್ಸ ಲೋಬೋ,ಉತ್ತರಕರ್ನಾಟಕ, ದಕ್ಷಿಣಕರ್ನಾಟಕ ಮತ್ತು ಬೆಂಗಳೂರು ವಲಯದ ಪೋಸ್ಟ್ ಮಾಸ್ಟರ್‍ಜನರಲ್ ಸೇರಿಇಲಾಖೆಯಉನ್ನತ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.
ಶ್ರೀಮತಿ ಮಂಗಲಾ ಮಂಜುನಾಥ ಭಾಗ್ವತಅವರು ಸಿರ್ಸಿಯ ಪ್ರತಿಷ್ಠಿತನಗರಸಭೆಯ ಮಾಜಿಅಧ್ಯಕ್ಷ ದಿ.ವಿ.ಆರ್. ಭಾಗ್ವತರಎರಡನೇ ಮಗ ಶ್ರೀ ಎಂ.ವಿ.ಭಾಗ್ವತ್‍ಕೃಷ್ಣಗ್ರಾಮೀಣಬ್ಯಾಂಕತರಬೇತಿಕೇಂದ್ರ ಗುಲಬುಗ್ರದಲ್ಲಿ ಹಿರಿಯಅಧಿಕಾರಿಇವರ ಪತ್ನಿಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ ಎಸ್.ಎಸ್.ಭಟ್ಟ ಲೋಕೇಶ್ವರಅವರ ಹಿರಿಯ ಮಗಳು. ಇವಳ ಈ ಪ್ರಶಸ್ತಿ ಪಡೆದುದು ಅಂಚೆಇಲಾಖೆಗೆ ಹಾಗೂ ನಮ್ಮಉತ್ತರಕನ್ನಡಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.