ಕುಮಟಾ: ಯಕ್ಷಗಾನದ ಮೇಲೆ ವಿಶೇಷ ಅಭಿಮಾನವನ್ನಿಟ್ಟು ಕಲೆ, ಸಂಸ್ಕøತಿ, ಕಲಾವಿದರುಗಳಿಗೆ ಪ್ರೋತ್ಸಾಹ ಹಾಗೂ ಕಲಾಪ್ರೇಕ್ಷಕರಿಗೆ ರಸದೌತಣ ಸದುದ್ದೇಶದಿಂದ ವಾರ್ಷಿಕವಾಗಿ ನಡೆಸುತ್ತಿರುವ ಕತಗಾಲ ಯಕ್ಷೋತ್ಸವವು 5ನೇ ಬಾರಿಗೆ ಇದೇ ಬರುವ ದಿನಾಂಕ: 27-10-2019 ರವಿವಾರದಂದು ಸಂಜೆ 4:00 ಗಂಟೆಗೆ ಕುಮಟಾ ತಾಲೂಕಿನ ಕತಗಾಲದ ಎಸ್.ಕೆ.ಪಿ. ಪ್ರೌಢಶಾಲೆಯ ಒಳಾಂಗಣ ರಂಗಮಂದಿರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಕನಕಾಂಗಿ ಕಲ್ಯಾಣ, ನರಕಾಸುರ ವಧೆ” ಎಂಬ ಆಖ್ಯಾನಗಳು ಪ್ರದರ್ಶನಗೊಳ್ಳಲಿದೆ. ಈ ಬಾರಿಯ ವಿಶೇಷವಾಗಿ ಹಿಮ್ಮೇಳ ಗಾನ, ವಾದನ, ಗಾನೋತ್ಸವ ಕೂಡಾ ಕಲಾಸಕ್ತರನ್ನು ರಂಜಿಸಲಿದೆ.

ಅಂದು ಸಂಜೆ 7:00 ಗಂಟೆಗೆ ಕತಗಾಲ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಶ್ರೀ ಕೃಷ್ಣಯಾಜಿ ಬಳ್ಕೂರರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇವರು ಕಾರ್ಯಕ್ರಮದ ಉದ್ಘಾಟಕರಾಗಿ, ಕರ್ನಾಟಕ ವಿಧಾನ ಪರಿಷತ್ ಮಾಜಿ ವಿಪಕ್ಷ ಮುಖ್ಯ ಸಚೇತಕರಾದ ಕ್ಯಾ. ಗಣೇಶ ಕಾರ್ಣಿಕ್‍ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದಿನಕರ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಶಿವಾನಂದ ಹೆಗಡೆ, ಕಡತೋಕಾ, ಶ್ರೀ ಗಜಾನನ ಎನ್. ಪೈ ಭಾಗವಹಿಸಲಿದ್ದಾರೆ. ಮುಖಂಡರಾದ ಶ್ರೀ ಸೂರಜ್ ನಾಯ್ಕ ಸೋನಿ, ಶ್ರೀ ವಿವೇಕ ಎಂ. ಜಾಲಿಸತ್ಗಿ, ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಕೃಷ್ಣಾನಂದ ವೆರ್ಣೇಕರ, ಶ್ರೀ ಎಸ್.ಎಸ್. ಕೊರವರ್ ಉಪಸ್ಥಿತರಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಯಶಸ್ವಿಗೊಳಿಸಿಕೊಡಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

RELATED ARTICLES  ಗಾಂಜಾ ಮಾರಾಟ : ವ್ಯಕ್ತಿ ಅರೆಸ್ಟ್..!

ಪತ್ರಿಕಾ ಗೋಷ್ಠಿಯಲ್ಲಿ ಕತಗಾಲ ಯಕ್ಷೋತ್ಸವ ಸಮಿತಿಯ ಅಧ್ಯಕ್ಷರಾಗಿ ಶ್ರೀ ಮಂಜುನಾಥ ಎಸ್. ಭಟ್ಟ ಭಂಡಿವಾಳ, ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಭಂಡಿವಾಳ, ಸದಸ್ಯರಾದ ಶ್ರೀ ಶ್ರೀಪಾದ ಹೆಗಡೆ, ಶ್ರೀ ವಿಘ್ನೇಶ್ವರ ಹೆಗಡೆ, ಶ್ರೀ ಗಣೇಶ ಗೌಡ, ಶ್ರೀ ಮಹೇಶ ದೇಶಭಂಡಾರಿ ಹಾಜರಿದ್ದರು.

RELATED ARTICLES  ಶ್ರೀ ಶಾಂತಿಕಾ ಪ್ರೊ 2022 ಲೀಗ್ ಕಬಡ್ಡಿ ಸಂಪನ್ನ.