ಭಟ್ಕಳ ಕ.ಸಾ.ಪ ದಿಂದ ನಾಗರೀಕ ಸೇವಾಕಾಂಕ್ಷಿ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ  ನಾಗರಿಕ ಸೇವಾಕಾಂಕ್ಷಿ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮವು ಭಟಕಳದ ದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನಲ್ಲಿ ಆಯೋಜಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಐ.ಎಫ್.ಎಸ್. ಅಧಿಕಾರಿ ದಾಮೋದರ್ ಎ.ಟಿ.ಮಾತನಾಡಿ  ಸತತ ಪರಿಶ್ರಮ, ಸರಿಯಾದ ಸಿದ್ಧತೆ ಬಧ್ಧತೆಯಿಂದ ಪ್ರಯತ್ನಿಸಿದರೆ ಯಾರು ಬೇಕಾದರೂ ನಾಗರಿಕ ಸೇವೆಯ ಉನ್ನತ ಹುದ್ಧೆಯನ್ನು ಅಲಂಕರಿಸಬಹುದು. ದೇಶದಾದ್ಯಂತ ನಾಗರಿಕ ಸೇವೆಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ    ಕನ್ನಡಿಗರು ಅತ್ಯಂತ ಉತ್ತಮ ಸೆವೆ ಸಲ್ಲಿಸುವ ಮೂಲಕ ಕರ್ನಾಟಕದ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಈ ಬಾರಿಯ ಐ.ಎ.ಎಸ್.ಪರೀಕ್ಷೆಯಲ್ಲಿ ನಂದಿನಿಯವರು ಪ್ರಥಮ ರ‍್ಯಾಂಕ್ ಪಡೆದಿರುವುದು ಕನ್ನಡಿಗರಿಗೆಲ್ಲ ಅಭಿಮಾನದ ಸಂಗತಿ. ಮುಂದಿನ ದಿನಗಳಲ್ಲಿ ಕನ್ನಡಿಗರು ಸೂಕ್ತ ಮಾರ್ಗದರ್ಶನ ತರಬೇತಿಯನ್ನು ಪಡೆಯುವ ಮೂಲಕ ನಾಗರಿಕ ಸೇವೆಗಳಲ್ಲಿ      ಕನ್ನಡಿಗರ ಸಂಖ್ಯೆ ಹೆಚ್ಚುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಐ.ಆರ್.ಎಸ್. ಅಧಿಕಾರಿ ರಾಘವೇಂದ್ರ ರಾಯ್ಕರ ಮಾತನಾಡಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ನಡೆಸಬೇಕಾದ ಪರೀಕ್ಷಾ ಸಿದ್ಧತೆ, ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಸಂದರ್ಶನ ಪ್ರಕ್ರಿಯ,ಆಯ್ಕೆಯಾದ ನಂತರ ನೀಡುವ ತರಬೇತಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ನಮ್ಮಲ್ಲಿರುವ ಶಕ್ತಿಸಾಮರ್ಥ್ಯಗಳನ್ನು ಸಕಾರಾತ್ಮಕ ಚಿಂತನೆಗಳ ಮೂಲಕ ಬಳಸಿಕೊಂಡಲ್ಲಿ ನಾಗರಿಕ ಸೇವೆಗಳು ಕನ್ನಡಿಗರಿಗೆ ಗಗನಕುಸುಮವಲ್ಲ ಎಂದು ನುಡಿದರು.
ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಸ್ವಾಗತಿಸಿದರು. ನಾಗೇಶ ದೇವಾಡಿಗ ಪ್ರಾಸ್ಥಾವಿಕ ಮಾತನಾಡಿದರು. ಎಮ್.ಪಿ.ಬಂಢಾರಿ ವಂದಿಸಿದರು. ಉಪನ್ಯಾಸಕಿ ಶ್ಯಾಮಲಾ ಕಾಮತ  ನಿರೂಪಿಸಿದರು.
ವೇದಿಕೆಯಲ್ಲಿ ಗುರುಸುಧೀಂದ್ರ ಬಿ.ಸಿ.ಎ.ಬಿ.ಬಿ.ಎ.ಕಾಲೇಜಿನ ಉಪಪ್ರಾಂಶುಪಾಲ ಶ್ರೀನಾಥ ಪೈ ಉಪಸ್ಥಿತರಿದ್ದರು

RELATED ARTICLES  ಶ್ರೀ ಶ್ರೀ ಶ್ರೀಶ್ರೀಧರಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗೋಕರ್ಣ ಗೌರವ