ಕುಮಟಾ: ಯಕ್ಷಗಾನದ ಮೇಲೆ ವಿಶೇಷ ಅಭಿಮಾನವನ್ನಿಟ್ಟು ಕಲೆ, ಸಂಸ್ಕøತಿ, ಕಲಾವಿದರುಗಳಿಗೆ ಪ್ರೋತ್ಸಾಹ ಹಾಗೂ ಕಲಾಪ್ರೇಕ್ಷಕರಿಗೆ ರಸದೌತಣ ಸದುದ್ದೇಶದಿಂದ ವಾರ್ಷಿಕವಾಗಿ ನಡೆಸುತ್ತಿರುವ ಕತಗಾಲ ಯಕ್ಷೋತ್ಸವವು 5ನೇ ಬಾರಿಗೆ 27-10-2019 ರವಿವಾರದಂದು ಸಂಜೆ 4:00 ಗಂಟೆಗೆ ಕುಮಟಾ ತಾಲೂಕಿನ ಕತಗಾಲದ ಎಸ್.ಕೆ.ಪಿ. ಪ್ರೌಢಶಾಲೆಯ ಒಳಾಂಗಣ ರಂಗಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.
ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಕನಕಾಂಗಿ ಕಲ್ಯಾಣ, ನರಕಾಸುರ ವಧೆ” ಎಂಬ ಆಖ್ಯಾನಗಳು ನಡೆದವು. ಈ ಬಾರಿಯ ವಿಶೇಷವಾಗಿ ಹಿಮ್ಮೇಳ ಗಾನ, ವಾದನ, ಗಾನೋತ್ಸವ ಕೂಡಾ ಕಲಾಸಕ್ತರನ್ನು ರಂಜಿಸಿತು.
ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಕೃಷ್ಣಯಾಜಿ ಬಳ್ಕೂರರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕರಾದ ಶ್ರೀ ದಿನಕರ ಶೆಟ್ಟಿ , ಶಿವಾನಂದ ಹೆಗಡೆ ಕಡತೋಕಾ, ಸೂರಜ್ ನಾಯ್ಕ ಸೋನಿ, ಗಜಾನನ ಪೈ ,ಶ್ರೀ ಮಂಜುನಾಥ್ ಭಟ್ಟ ಹಾಗೂ ಶಿಕ್ಷಕರಾದ ಶ್ರೀ ವಿನಾಯಕ ಎಸ್ .ಭಟ್ಟ ಇನ್ನಿತರರು ಇದ್ದರು.