ಕುಮಟಾ: “ನುಡಿ ಹಬ್ಬ-2019 ದಶಮಾನೋತ್ಸವ ಕಾರ್ಯಕ್ರಮವನ್ನು ಬರುವ ನವೆಂಬರ್ 10 ರವಿವಾರ ನಡೆಸಲು ತಿರ್ಮಾನಿಸಿದ್ದೇವೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾದ ಅಧ್ಯಕ್ಷ ಎಂ.ಜಿ.ಭಟ್ ತಿಳಿಸಿದ್ದಾರೆ.
ಈ ಬಾರಿ ನವೆಂಬರ್ 1 ರಂದು ಹವಾಮಾನ ಇಲಾಖೆ ಅಕಾಲಿಕ ಮಳೆಯ ಮುನ್ಸೂಚನೆ ನೀಡಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಆದ್ದರಿಂದ ಬರುವ ನವೆಂಬರ್ 10 ರವಿವಾರವ ಎಲ್ಲರಿಗೂ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ “ನುಡಿಹಬ್ಬ” ರವಿವಾರದಂದೇ ಆಯೋಜಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕೆಂದು ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಎಂ.ಜಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.