ಕುಮಟಾ: ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವ ಇಂದಿನ ಯುಗದಲ್ಲಿ, ತಾಲೂಕಿನ ಕೆಲ ಯುವಕರು ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ. ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕುಮಟಾ ಘಟಕದ ವತಿಯಿಂದ ಕೆಲ ಯುವಕರು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪಟ್ಟಣದ ಪಾಂಡುರಂಗ ಹೊಟೇಲ್ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ೬೬ ರ ಹರಕಡೆ ಕ್ರಾಸ್‌ವರೆಗೆ ರಸ್ತೆಯ ತುಂಬಾ ಹೊಂಡಗಳೇ ಇದ್ದು, ವಾಹನ ಸವಾರರು ಸಂಚರಿಸುವುದೇ ಕಷ್ಟಕರವಾಗಿತ್ತು. ಯಮ ಸ್ವರೂಪಿ ಹೊಂಡಗಳನ್ನು ತಪ್ಪಿಸಲು ಹೋಗಿ ಬೈಕ್‌ಗಳಿಂದ ಬಿದ್ದು ಅದೆಷ್ಟೋ ಜನರು ತೊಂದರೆ ಅನುಭವಿಸಿದ್ದರು. ಇದನ್ನು ಮನಗಂಡ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ತಾಲೂಕು ಘಟಕದ ಯುವಕರು, ಯಾವುದೇ ಫಲಾಪೇಕ್ಷೆಯಿಲ್ಲದೇ ಈ ಹೊಂಡಗಳನ್ನು ಮುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದು ಸಮಾಜಕ್ಕೆ ಮಾದರಿಯಾದರಲ್ಲದೇ ಜವಾಬ್ದಾರಿ ಸ್ಥಾನದಲ್ಲಿರುವವರನ್ನು ಇನ್ನೊಮ್ಮೆ ಎಚ್ಚರಿಸುವ ಕಾರ್ಯ ಮಾಡಿದ್ದಾರೆ.

RELATED ARTICLES  ಅಕ್ರಮವಾಗಿ ಮರ ಕಡಿದು ತುಂಡುಗಳ ಸಾಗಾಟ : ಆರೋಪಿಗಳು ಅರೆಸ್ಟ್..!

ಈ ಸಂಧರ್ಭದಲ್ಲಿ ಸಂಘಟನೆಯ ಸದಸ್ಯರಾದ ಭರತ್ ನಾಯ್ಕ ಮಾತನಾಡಿ,” ನಮ್ಮ ಕಣ್ಣ ಮುಂದೆಯೇ ಅನೇಕ ಅಪಘಾತಗಳನ್ನು ಕಾಣುತ್ತೇವೆ. ಅವುಗಳಲ್ಲಿ ಹಲವು ಅಪಘಾತಗಳು ರಸ್ತೆಯ ಹೊಂಡಗಳಿಂದಲೇ ಸಂಭವಿಸಿರುತ್ತದೆ. ಹೀಗಾಗಿ ಅಪಘಾತಾವಾದಗ ನೆರವಾಗುವುದಕ್ಕಿಂತ, ಅಪಘಾತಕ್ಕೆ ಮುಂಚಿತವಾಗಿ ಎಚ್ಚರಿಕೆಯ ದೃಷ್ಠಿಯಿಂದ ತಾಲೂಕಿನ ಹೆದ್ದಾರಿಯಲ್ಲಿನ ಹೊಂಡಗಳನ್ನ ನಿಸ್ವಾರ್ಥವಾಗಿ ಮುಚ್ಚುತ್ತಿದ್ದೇವೆ. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಸಮಾಜಿಕ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವೂ ಅತಿ ಅವಶ್ಯಕವಾಗಿದೆ “ಎಂದರು.

RELATED ARTICLES  ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಶ್ರೀ ಶ್ರೀ ಶಾಂತಮ್ಮ ತಾಯಿ.


ಈ ಕಾರ್ಯದಲ್ಲಿ ಅಭಿಜಿತ್ ನಾಯ್ಕ, ಪುನಿತ್ ಜಾಧವ್, ಕೃಷ್ಣ ಮಣಕೀಕರ್, ಶಾಹಿದ ಖಾನ್, ಎಜೆಸ್ನಲ್ ನಾಲ್ಬನ್ ಸೇರಿದಂತೆ ಹಲವು ಯುವಕರು ಇದ್ದರು.