ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿರಸಿ ವತಿಯಿಂದ ವಿಶ್ವವಿದ್ಯಾಲಯಗಳಲ್ಲಿ Document Generation System ( EDGS) ತಂತ್ರಾಂಶ ಬಳಸಲು ವಿದ್ಯಾರ್ಥಿಗಳ ಹಣವನ್ನು
ಲೂಟಿ ಮಾಡಲು ಸರ್ಕಾರ ಹೊರಟಿರುವುದನ್ನು ಖಂಡಿಸಿ ರಾಜ್ಯಾದಾದ್ಯಂತ ಪ್ರತಿಭಟನೆಗೆ ದಿನಾಂಕ
08-11-2019 ರಂದು ಕರೆ ನೀಡಿತು.

ಶಿಕ್ಷಣವು ಸರ್ವರಿಗೆ ಸಿಗಬೇಕು ಅದು ಮಾರಾಟದ ವಸ್ತುವಲ್ಲ ಎಂದು ನಮ್ಮ ದೇಶದ ಹಿರಿಯರು
ಸಾರಿ ಹೇಳಿದ್ದಾರೆ.ಅದರಲ್ಲೂ ಕರ್ನಾಟಕ ದೇಶದ ಶಿಕ್ಷಣ ರಾಜಧಾನಿ ಜಗತ್ತಿನ ಬೇರೆ ಬೇರೆ ದೇಶದ
ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಇದೆಲ್ಲದರ ನಡುವೆ ಇಂದು ಸರ್ಕಾರ
ವಿದ್ಯಾರ್ಥಿಗಳ ಅಂಕಪಟ್ಟಿಯಿಂದ ಹಣ ಮಾಡಲು ಹೊರಟಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ
ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರಿ ಆದೇಶ ದಿನಾಂಕ 31.05.2019 ರ ಪ್ರಕಾರ ತಂತ್ರಾಂಶವನ್ನು ಬಳಸಲು KEONICS ಸಂಸ್ಥೆಗೆ ವಹಿಸಲು ಸೂಚಿಸಲಾಗಿದೆ.

RELATED ARTICLES  ನಾಮಪತ್ರ ಸಲ್ಲಿಸುತ್ತಿಲ್ಲ ಶಿವಾನಂದ ಹೆಗಡೆ ಕಡತೋಕಾ : ಶಾರದಾ ಶೆಟ್ಟಿಗೆ ಬೆಂಬಲ?

ಇದರ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ ಗಳನ್ನು ಪ್ರತಿ ವಿದ್ಯಾರ್ಥಿಯಿಂದ ವಸೂಲಿ ಮಾಡಲು
ಹೊರಟಿರುವುದನ್ನು ಖಂಡಿಸುತ್ತದೆ. 1 ರೂಗಳಿಂದ 3 ವರೆಗೆ ಬೇರೆ ಬೇರೆ ವಿವಿಗಳಲ್ಲಿ ಅಂಕಪಟ್ಟಿಗೆ ಖರ್ಚು
ಮಾಡುತ್ತಿದ್ದನ್ನು ಸರಾಸರಿ 156 ದೊರೆಯುತ್ತಾರೆ ರೂಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಿರುವುದು
ಅನೇಕ ಪ್ರಶ್ನೆಗಳಗೆ ಕಾರಣವಾಗಿದೆ . ಇದನ್ನು ಖಂಡಿಸಿ ಎ.ಬಿ.ವಿ.ಪಿ ಶಿರಸಿ ವತಿಯಿಂದ ಎಸಿ ಆಫೀಸ್ ಮನವಿ
ಕೊಡಲಾಯಿತು. ಕಾರ್ಯಕರ್ತರಾದ ಜಿಲ್ಲಾ ಸಂಚಾಲಕರಾದ ಕಮಲಾಕರ ಮರಾಠೆ ಹಾಗೂ ನಗರ
ಸಂಘಟನಾ ಕಾರ್ಯದರ್ಶಿಗಳಾದ ಶಿವಕಾಂತ, ಜಿಲ್ಲಾ ಸಹ ಸಂಚಾಲಕರಾದ ಪ್ರಶಾಂತ ವಿ.ಟಿ., ಜಿಲ್ಲಾ
ಎಸ್.ಎಫ್.ಡಿ ಪ್ರಮುಖ ಅಕ್ಷಯ ಪೂಜಾರಿ, ನಗರ ಕಾರ್ಯದರ್ಶಿ ಗುರುರಾಜ ನಾಯ್ಕ, ನಗರ
ಕಾರ್ಯದರ್ಶಿ ಪ್ರಶಾಂತ ಪಿ.ಟಿ., ಮತ್ತು ಕಾರ್ಯಕರ್ತರಾದ ಸಂದೀಪ, ಅಭಿಜಿತ್, ಅರುಣ, ಸತೀಶ, ಸುಪ್ರೀತ್, ಅಭಿಷೇಕ್ ರವಿಕಿರಣ,ಗೋಪಾಲ,ಮಣಿಕಂಠ,ನಾಗೇಶ ಅಕ್ಷಯ ಹಾಜರಿದ್ದರು.

RELATED ARTICLES  ಹಾಲಾಡಿ ಬಗ್ಗೆ ಒಲವು ತೋರಿದ ಬಿ ಎಸ್ ವೈ