ಗೋಕರ್ಣ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಕಾರಿ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ 12-11-2019 ಮಂಗಳವಾರ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ನಂತರ ಭೀಮಕೊಂಡಕ್ಕೆ ಉತ್ಸವ ಹೋಗಿ ಅಲ್ಲಿ ಧಾತ್ರಿ ಹವನ, ವನಭೋಜನ ನಂತರ ರಾತ್ರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿ ರಥೋತ್ಸವ ಜರುಗಲಿದೆ.
ಎಲ್ಲ ಸಾರ್ವಜನಿಕರು ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಆದರದ ಆಮಂತ್ರಣ