ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನಡೆಯುವ ನುಡಿಹಬ್ಬ ಕಾರ್ಯಕ್ರಮ ವನ್ನ ಆಡಳಿತ ವ್ಯವಸ್ಥೆಯ ಆದೇಶವನ್ನ ಅನುಸರಿಸಿ ಇನ್ನೊಮ್ಮೆ ಮುಂದೂಡಲಾಗಿದೆ ಮುಂದಿನ ದಿನಾಂಕವನ್ನ ಸದ್ಯದಲ್ಲೇ ತಿಳಿಸಲಾಗುವುದು ಎಂದು ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಂ ಜಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ನವೆಂಬರ್ ೧ ರಾಜ್ಯೋತ್ಸವ ನಡೆಯಬೇಕಾಗಿದ್ದ ನುಡಿಹಬ್ಬ ಕಾರ್ಯಕ್ರಮ ಅಕಾಲಿಕ ಮಳೆಯಿಂದ ಆಡಳಿತ ವ್ಯವಸ್ಥೆಯ ನಿರ್ದೇಶನದಂತೆ ಮುಂದೂಡಲಾಗಿತ್ತು ಹಾಗು ನವೆಂಬರ್ ೧೦ ರವಿವರರಂದು ನಿಶ್ಚಯಿಸಲಾಗಿತ್ತು ,ಆದರೆ ಅಯೋದ್ಯೆಯ ತೀರ್ಪಿನ ಸಲುವಾಗಿ ದೇಶಾದ್ಯಂತ ಮುನ್ನೆಚ್ಚರಿಕೆ ವಹಿಸಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಮತ್ತೆ ಪುನಃ ಮುಂದಕ್ಕೆ ಹಾಕಲಾಗಿದೆ ,ಮುಂದಿನ ದಿನಾಂಕವನ್ನ ನಿರ್ಧರಿಸಿ ತಿಳಿಸಲಾಗುವುದು ,ಸಾರ್ವಜನಿಕರು ಸಹಕರಿಸಬೇಕೆಂದು ಸಮಿತಿಯ ಪರವಾಗಿ ಅಧ್ಯಕ್ಷ ಎಂ ಜಿ ಭಟ್ ತಿಳಿಸಿದ್ದಾರೆ .