ಕುಮಟಾ : ತಾಲೂಕಿನ ಉತ್ತಮ‌ ಸಂಘಟನೆಗಳಲ್ಲಿ ಒಂದಾದ ವಿವೇಕ ನಗರ ವಿಕಾಸ ಸಂಘದ ಆಶ್ರಯದಲ್ಲಿ ಜಿಲ್ಲಾ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಸಂಘ (ರಿ) ಉತ್ತರ ಕನ್ನಡ ಇದರ ಸಹಯೋಗದೊಂದಿಗೆ ಶಾರದಾ ನಿಲಯ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಡಾ.ಡಿ.ಡಿ.ನಾಯಕರವರು ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು ನಂತರ ಅವರು ಮಾತನಾಡಿ ಇಂತಹ ಶಿಬಿರಗಳು ಸಾಮಾಜಿಕ‌ ಕಳಕಳಿಗೆ ಸಾಕ್ಷಿ ಎಂದರು.

ಡಾ.ಜಿ.ಜಿ.ಹೆಗಡೆಯವರು ಆನಂದವೇ ಆರೋಗ್ಯ.ನಗುವಿನಲ್ಲಿ ಪ್ರಫುಲ್ಲತೆ ಕಾಣುವಂತಿರಲಿ ಎನ್ನುತ್ತ ಆರೋಗ್ಯ ಕಾಪಾಡಿಕೊಳ್ಳಲು ಯೋಗ್ಯ ಆಹಾರ,ಯೋಗದ ಪ್ರಯೋಜನ,,ಆಟದ ಮಹತ್ವ,ಸಕಾಲ ನಿದ್ರೆ ,ಭಗವಂತನಲ್ಲಿ ಶೃದ್ಧೆ ಮುಂತಾಗಿ ಪಂಚಸೂತ್ರದ ಬಗ್ಗೆ ವಿವರಿಸಿದರು.

ಖ್ಯಾತ ಎಲುವು ಮೂಳೆ ತಜ್ಙ ಡಾ.ಶಶಾಂಕ ಜೆ.ಎಮ್.ರವರು ತಮ್ಮ ದೈನಂದಿನ ವೃತ್ತಿ ಜೀವನದ ಅನುಭವದ ಕೆಲ ನಿದರ್ಶನಗಳ ವಿವರಣೆಯೊಂದಿಗೆ ಘಟನೆ ಘಟಿಸಿದಾಗ ತಕ್ಷಣ ಕೈಕೊಳ್ಳಬೇಕಾದ ಅವಶ್ಯಕ ಕ್ರಮ ಹಾಗೂ ವಹಿಸಬೇಕಾದ ಮುಂಜಾಗೃತಿ ಬಗ್ಗೆ ವಿವರಿಸುತ್ತ ಆರೋಗ್ಯ ದ ಮಹತ್ವ ಸಾರುವ ಇಂತಹ ಜನೋಪಯೋಗಿ ಕಾರ್ಯಗಳು ಎಲ್ಲೆಡೆ ಜರುಗುವಂಯಾಗಲಿ ಎಂದು ಆಶಿಸುತ್ತಾ ವಿಕಾಸ ಸಂಘದ ಕಾರ್ಯ ಶ್ಲಾಘಿಸಿದರು.

RELATED ARTICLES  ಭಟ್ಕಳದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ : ಇಂಡಿಯನ್ ನವಾಯತ್ ಫೋರಂ ವತಿಯಿಂದ ಆಯೋಜನೆ.

ಸ್ತ್ರೀರೋಗ ತಜ್ಙೆ ಡಾ.ರೂಪಾಲಿ ಎಸ್.ಎಮ್.ರವರು ಕುಟುಂಬದ ಸರ್ವ ಸದಸ್ಯರ ಕಾರ್ಯ ಗಳಲ್ಲಿ ದಿನವಿಡೀ ಪೂರಕವಾಗಿ ನಿಲ್ಲುವ ಮಹಿಳೆ ತನ್ನ ಆರೋಗ್ಯವನ್ನು ಅಲಕ್ಷಿಸುವ ಬಗ್ಗೆ ವಿವರಿಸಿ ಪ್ರತಿಯೋರ್ವ ಮಹಿಳೆಯೂ ತನ್ನ ಮಾನಸಿಕ,ಶಾರೀರಿಕ ಸ್ವಸ್ಥ ತೆ ಕಾಪಾಡಿಕೊಳ್ಳುವಲ್ಲಿ ವಹಿಸಬೇಕಾದ ಕಾಳಜಿ ಕುರಿತು ವಿವರಿಸಿದರು. ಜಿಲ್ಲಾ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಸಂಘ (ರಿ) ಉತ್ತರ ಕನ್ನಡ ಇದರ ಸುಬ್ರಾಯ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಪ್ರಸನ್ನ ಆರ್. ನಾಯಕ ರವರು ವಿವೇಕನಗರದೊಂದಿಗಿನ ತನ್ನ ಒಡನಾಟ ವಿವರಿಸಿ ವಿಕಾಸ ಸಂಘದ ಇಂತಹ ಮಾದರೀ ಚಟುವಟಿಕೆಗಳಿಗೆ ಸದಾ ಸಹಕರಿಸುವುದಾಗಿ ತಿಳಿಸಿ ಸಾಂದರ್ಭಿಕ ಹಿತನುಡಿಗಳನ್ನಾಡಿದರು. ಹಿರಿಯ ವೈದ್ಯ ಶ್ರೀಧರ ಭಟ್ಟ ಸಾಂದರ್ಭಿಕ ಮಾತನಾಡಿದರು.

RELATED ARTICLES  ದಿನಕರ ಶೆಟ್ಟಿಯವರಿಗೆ ಗೌರವಾರ್ಪಣೆ ಮಾಡಿದ ನಾಡವರ ಸಮುದಾಯ.

ವಿಕಾಸ ಸಂಘದ ಉಪಾಧ್ಯಕ್ಷ ಎಸ್ ಆಯ್.ನಾಯ್ಕ ಸ್ವಾಗತಿಸಿದರು.ಅಧ್ಯಕ್ಷ ಡಾ.ಎಮ್.ಆರ್.ನಾಯಕ ಪ್ರಾಸ್ತಾವಿಕ ಮಾತನ್ನಾಡಿದರು.ಕಾರ್ಯದರ್ಶಿ ಡಾ.ಡಿ.ಡಿ.ಭಟ್ಟ ವಂದಸಿದರು.ಜಯದೇವ ಬಳಗಂಡಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸುತ್ತಮುತ್ತಲಿನ ಹಲವಾರು ನಾಗರಿಕರು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಕೊಂಡರಲ್ಲದೇ ವೈದ್ಯಕೀಯ ತಪಾಸಣೆಗೊಳಪಟ್ಟು ಶಿಬಿರದ ಸದುಪಯೋಗ ಪಡೆದರು.


ಸಂಘದ ಸದಸ್ಯರಾದ ಪ್ರೊ.ಅರುಣ ಹೆಗಡೆ,ಆರ್.ಎನ್.ಪಟಗಾರ,ಸಂಜಯ ಪಂಡಿತ,ಗಣೇಶ ಪಟಗಾರ,ತಿಮ್ಮಪ್ಪ ಮುಕ್ರಿ,ಮಂಜುನಾಥ ಗೌಡ.ಕಾಗಾಲಮಾಸ್ತರ,ದತ್ತಾತ್ರೇಯ ಭಟ್ಟ ,ಮಹಾಬಲೇಶ್ವರ ಹೆಬ್ಬಾರ್, ಶಾಲೆಯ ಮುಖ್ಯ ಶಿಕ್ಷಕ ದೇವು ಮುಕ್ರಿ,ಸಂಘದ ಖಜಾಂಚಿ ವಿ.ವಿ ಹೊಸಕಟ್ಟಾ, ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಕಾರಣರಾದರು.