ಶಿರಸಿ : ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಸುಪರ್ ಮಾರ್ಕೆಟ್‍ನಲ್ಲಿ ನವರಾತ್ರಿಯಿಂದ ದೀಪಾವಳಿ ವರೆಗಿನ ರೂ.2,000 ಮೇಲ್ಪಟ್ಟ ಖರೀದಿಗಳ ಮೇಲಿನ ಖರೀದಿ ಬಿಲ್‍ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ದಿ:09.11.2019ರಂದು ಆಯೋಜಿಸಲಾಗಿತ್ತು. ಶಿರಸಿ, ಸಿದ್ದಾಪುರ ಯಲ್ಲಾಪುರ ಹಾಗೂ ಮುಂಡಗೋಡ ಶಾಖೆಗಳಲ್ಲಿ ಖರೀದಿ ಬಿಲ್‍ಗಳನ್ನು ಸೇರಿಸಿ ಲಕ್ಕಿ ಡ್ರಾ ಮಾಡುವ ಮೂಲಕವಾಗಿ 155ಕ್ಕೂ ಹೆಚ್ಚಿನ ಅದೃಷ್ಠಶಾಲಿಗಳನ್ನು ಆಯ್ಕೆಮಾಡಲಾಯಿತು. ಈ ರೀತಿ ಆಯ್ಕೆ ಮಾಡಿದ ಅದೃಷ್ಠಶಾಲಿಗಳಲ್ಲಿ ಮೊದಲನೇ ಬಹುಮಾನ ನೀಲ್ ಕಮಲ್ ಸೋಫಾ ವಿಜೇತರಾಗಿ ಶ್ರೀ ನಾಗರಾಜ ಶಿವು ನಾಯ್ಕ ಚಿಪಗಿ ಹೊಸ್ಮನೆ, ಎರಡನೇ ಬಹುಮಾನ ರೆಫೋಸ್ ಮೇಟ್ರೆಸ್ ವಿಜೇತರುಗಳಾಗಿ ಶ್ರೀ ಚೇತನ್ ಡಿ. ಹೊನ್ನಾವರಕರ & ಶ್ರೀ ಗಣಪತಿ ಅಗ್ಗೇರೆ ಹಾಗೂ ಮೂರನೇ ಬಹುಮಾನ ಫೋರ್ಚುನ್ ಆಗ್ರೋ ಹೈಪ್ರೆಶರ್ ವಾಷರ್ ವಿಜೇತರುಗಳಾಗಿ ಶ್ರೀ ಶ್ರೀಧರ ಕೆ.ಎಮ್. & ಶ್ರೀ ಜನಾರ್ಧನ ತಮ್ಮಾಣಿ ಗೌಡ ಕುಕ್ರಿ & ಶ್ರೀ ವೀಣಾ ಪಿ. ಭಟ್ಟ ಶಿರಸಿ ಇವರುಗಳು ಆಯ್ಕೆಯಾಗಿರುವುದಾಗಿ ಹಾಗೂ ಈ ಎಲ್ಲಾ ಬಹುಮಾನಗಳ ಅಂತೂ ಮೊತ್ತ ರೂ.2 ಲಕ್ಷಕ್ಕೂ ಹೆಚ್ಚಿನ ಮೊತ್ತವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

RELATED ARTICLES  ಗೌರಿ ಲಂಕೇಶ್ ಕಥೆ ಮುಗಿಯಿತು, ಈಗ ನಿಮ್ಮ ಸಮಯ ಬಂದಿದೆ : ಅನಾಮಧೇಯ ಜೀವ ಬೆದರಿಕೆ ಪತ್ರ


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ಜಿ. ಹೆಗಡೆ ಊರತೋಟ, ಶ್ರೀ ಎಂ. ಪಿ. ಹೆಗಡೆ ಬೊಪ್ಪನಳ್ಳಿ ಹಾಗೂ ಎಪಿಎಮ್‍ಸಿ ಉಪಾಧ್ಯಕ್ಷರಾದ ಶ್ರೀಮತಿ ವಿವiಲಾ ಡಿ. ಹೆಗಡೆ ಇವರುಗಳು ಆಗಮಿಸಿದ್ದರು. ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ, ಆಡಳಿತ ಮಂಡಳಿ ಸದಸ್ಯರು, ಪ್ರಧಾನ ವ್ಯವಸ್ಥಾಪಕರು ಹಾಗೂ ಸಂಘದ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES  ನಾಗರಾಜ ನಾಯಕರವರ ಮುಂದಾಳತ್ವದಲ್ಲಿ ಹೊಸ ಭರವಸೆಯ "ಬೆಳಕು"