ಕಾರವಾರ: ನಗರದ ಬಾಂಡಿಶಿಟ್ಟಾದ ಸ್ಮಶಾನ ಭೂಮಿಯನ್ನು ನಗರಸಭೆ ಸದಸ್ಯ ನಂದಾ ಸಾವಂತ್ ನೇತೃತ್ವದಲ್ಲಿ ಸ್ಥಳೀಯ ಯುವಕರು ಭಾನುವಾರ ಸ್ವಚ್ಛಗೊಳಿಸಿದ್ದಾರೆ.
ಸ್ಮಶಾನದ ಒಳ ಅವರಣದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ಅಂತ್ಯಸಂಸ್ಕಾರ ಕ್ರಿಯೆ ನಡೆಸಲು ಅಡಚಣೆಯುಂಟಾಗಿತ್ತು. ಅಂತಿಮ ಸಂಸ್ಕಾರದ ವೇಳೆ ಸಾರ್ವಜನಿಕರು ನಿಲ್ಲಲೂ ಜಾಗವಿಲ್ಲದ ಸ್ಥಿತಿ ಇತ್ತು. ಹಾಗಾಗಿ ಸ್ಥಳೀಯ ಯುವಕರ ಸಹಕಾರದೊಂದಿಗೆ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ವಿಜಯಕುಮಾರ ನಾಯ್ಕ, ಮಾರುತಿ ಕಲ್ಗುಟ್ಕರ್, ಪ್ರಶಾಂತ ನಾಯ್ಕ, ಗಜಾನನ ನಾಯ್ಕ, ವಿಶಾಲ ನಾಯ್ಕ, ಸಂದೇಶ ಆಚಾರಿ, ಗೌರೀಶ ಕುಬಾಲ್ ಇದ್ದರು.