ದಾಂಡೇಲಿಯ ಬಂಗೂರನಗರ ಕಲಾ ವಿಜ್ಞಾನ , ವಾಣಿಜ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕøತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್. ಡಿ. ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕ್ರಮವಾಗಿ ಭಕ್ತಿಗೀತೆ ಸ್ಪರ್ಧೆಯಲ್ಲಿ ನಿಹಾರಿಕಾ ಶ್ರೀಧರ ಭಟ್ಟ ಪ್ರಥಮ, ದ್ವಿತೀಯ ಪಿಯುಸಿ ವಿಭಾಗದಲ್ಲಿ ಧನ್ಯ ವಿ ಹೆಗಡೆ ತೃತೀಯ, ಭಾವಗೀತೆಯಲ್ಲಿ ಗಣೇಶ ಸುರೇಶ ಭಟ್ಟ ದ್ವಿತೀಯ, ಕನ್ನಡ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ಅಶ್ವಿನಿ ಭೈರವ ಹೆಗಡೆ ದ್ವಿತೀಯ, ಏಕಾಪಾತ್ರಾಭಿನಯದಲ್ಲಿ ಇನಿ ಮಂಜುನಾಥ ನಾಯ್ಕ ಪ್ರಥಮ, ಚಿತ್ರ ಕಲೆಯಲ್ಲಿ ಪ್ರಶಾಂತ ಬೀರು ಗೌಡ ತೃತೀಯ, ಆಶುಭಾಷಣದಲ್ಲಿ ಮೇಧಾ ಶಂಕರ ಭಟ್ಟ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರಲ್ಲಿ 5 ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

RELATED ARTICLES  ಈ ನದಿಗಳ ನೀರನ್ನು ಬಳಸೋವಾಗ ಇರಲಿ ಎಚ್ಚರ.

ಈ ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಘನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.